ಬೀದಿನಾಯಿಗಳಿಗೆ ಆಹಾರದ ಹಕ್ಕಿದೆ ಮತ್ತು ಆಹಾರ ನೀಡುವ ಹಕ್ಕಿದೆ ಎಂದು ಹೈಕೋರ್ಟ್ ನೀಡಿದ್ದ ಮಾರ್ಗಸೂಚಿ ಸಹಿತ ಆದೇಶಕ್ಕೆ ಸುಪ್ರಿಂ ಕೋರ್ಟ್ ತಡೆ ನೀಡಿದೆ.
ಹೈಕೋರ್ಟ್ ಆದೇಶದ ವಿರುದ್ಧ ಎನ್‌ಜಿಒ ಸಲ್ಲಿಸಿದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರಿಂ ದ್ವಿಸದಸ್ಯ ಪೀಠವ ಪ್ರಾಣಿ ಕಲ್ಯಾಣ ಮಂಡಳಿ, ದೆಹಲಿ ಸರ್ಕಾರ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿದೆ.
ಎದೆ ಹಾಲು ಕುಡಿದ ಮಗುವಿಗಿಲ್ಲ ಹೃದಯದ ಖಾಯಿಲೆ ಆತಂಕ…..!
ಜೂನ್ 24ರ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಹ್ಯೂಮನ್ ಫೌಂಡೇಶನ್ ಫಾರ್ ಪೀಪಲ್ ಮತ್ತು ಅನಿಮಲ್ಸ್ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಹೈಕೋರ್ಟ್‌ನ ನಿರ್ದೇಶನ ಬೀದಿ ನಾಯಿಗಳ ಹಾವಳಿ ಹೆಚ್ಚಾಗಲು ಕಾರಣವಾಗಬಹುದು ಎಂದು ಎನ್‌ಜಿಒ ಪ್ರತಿಪಾದಿಸಿತ್ತು.
ನಾಯಿಗಳಿಗೆ ಬೀದಿಗಳಲ್ಲಿ ಅಥವಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ನೀಡುವುದು ನಾಗರಿಕರಿಗೆ ನೇರ ಅಪಾಯವಾಗಿದೆ ಎಂದು ಎನ್‌ಜಿಒ ಅಭಿಪ್ರಾಯ ನೀಡಿತ್ತು.
ಈ ಮುನ್ನ ಬೀದಿನಾಯಿಗಳಿಗೆ ಆಹಾರದ ಹಕ್ಕಿದೆ ಮತ್ತು ನಾಗರಿಕರಿಗೆ ಆಹಾರ ನೀಡುವ ಹಕ್ಕಿದೆ ಎಂದು ದೆಹಲಿ ಹೈಕೋರ್ಟ್ ಹೇಳಿತ್ತಲ್ಲದೇ, ಈ ಹಕ್ಕನ್ನು ಚಲಾಯಿಸುವಾಗ, ಅದು ಇತರರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು ಉಪದ್ರವ ಆಗಬಾರದೆಂದು ಸೂಚಿಸಿತ್ತು.