ನವದೆಹಲಿ: ಭಾರತದ ಸರ್ವೋಚ್ಛ ನ್ಯಾಯಾಲಯವು ಜುಲೈ 29ರಿಂದ ಆಗಸ್ಟ್ 3ರವರೆಗೆ ವಿಶೇಷ ಲೋಕ ಅದಾಲತ್ ಸಪ್ತಾಹ ಆಯೋಜಿಸಿದೆ.
ಈ ವಿಶೇಷ ಲೋಕ ಅದಾಲತ್ ಪ್ರಯೋಜನವನ್ನು ಪಡೆದುಕೊಳ್ಳಲು ವಕೀಲರು ಮತ್ತು ಕಕ್ಷಿದಾರರನ್ನು ವಿನಂತಿಸಲಾಗಿದೆ. ಪಾರ್ಟಿಗಳು ತಮ್ಮ ವಿವಾದಗಳ ಅಂತಿಮ ಇತ್ಯರ್ಥಕ್ಕೆ ಬರಲು ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಅಥವಾ ಭೌತಿಕವಾಗಿ ಭಾಗವಹಿಸಬಹುದಾಗಿದೆ.
ಜುಲೈ 29 ರಿಂದ ಆಗಸ್ಟ್ 3 ರವರೆಗೆ ನಡೆಯಲಿರುವ ವಿಶೇಷ ಲೋಕ ಅದಾಲತ್ ಸಪ್ತಾಹದ ಪ್ರಯೋಜನ ಪಡೆಯುವಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು ತಿಳಿಸಿದ್ದಾರೆ. ವೈವಾಹಿಕ ಮತ್ತು ಆಸ್ತಿ ವಿವಾದಗಳು, ಮೋಟಾರು ಅಪಘಾತ, ಭೂಸ್ವಾಧೀನ ಪರಿಹಾರ, ಸೇವೆ ಮತ್ತು ಕಾರ್ಮಿಕ ಸಮಸ್ಯೆಗಳು ಸೇರಿದಂತೆ ಇತ್ಯರ್ಥದ ಅಂಶಗಳನ್ನು ಹೊಂದಿರುವ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ನ ವಿಶೇಷ ಲೋಕ ಅದಾಲತ್‌ನಲ್ಲಿ ಕೈಗೆತ್ತಿಕೊಳ್ಳಲಾಗುವುದು. ಈ ಅದಾಲತ್ ನಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸುವಿಕೆ ಸಹ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ವಿಶೇಷ ಲೋಕ ಅದಾಲತ್‌ನ ಪ್ರಯೋಜನಗಳು
ತ್ವರಿತ ರಾಜಿ ಮತ್ತು ವಿವಾದಗಳ ಇತ್ಯರ್ಥ
ವಿವಾದಗಳ ವೆಚ್ಚ-ಪರಿಣಾಮಕಾರಿ ಪರಿಹಾರ
ಕೋರ್ಟ್ ಶುಲ್ಕದ ಮರುಪಾವತಿ
ನಿಮ್ಮ ಹತ್ತಿರದ ರಾಜ್ಯ/ಜಿಲ್ಲೆ/ತಾಲೂಕಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಹ ನೀವು ಸಂಪರ್ಕಿಸಬಹುದು.
https://www.sci.gov.in/ ವೆಬ್‌ಸೈಟ್‌ನಲ್ಲಿ ಮಾಹಿತಿ ಲಭ್ಯವಿದೆ
ಸಂಪರ್ಕ ವಿವರ
ಕೊಠಡಿ ಸಂಖ್ಯೆ 127, ಬ್ಲಾಕ್ B, ಮೊದಲ ಮಹಡಿ, ಹೆಚ್ಚುವರಿ ಕಟ್ಟಡ ಸಂಕೀರ್ಣ, ಭಾರತದ ಸುಪ್ರೀಂ ಕೋರ್ಟ್, ನವದೆಹಲಿ-110001
ದೂರವಾಣಿ: +91-11-23115656