ನವದೆಹಲಿ: 74ನೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನಿಂದ ಮಹತ್ವದ ನಿರ್ಧಾರ ಕೈಗೊಂಡಿದ್ದು, ಸುಪ್ರೀಂಕೋರ್ಟ್ ತೀರ್ಪುಗಳು ಹಲವು ಭಾಷೆಗಳಿಗೆ ಭಾಷಾಂತರ ಮಾಡಲಾಗುವುದು.
ಸುಪ್ರೀಂಕೋರ್ಟ್ ಪ್ರಮುಖ 1,268 ತೀರ್ಪುಗಳು ವಿವಿಧ ಭಾಷೆಗಳಲ್ಲಿ ಲಭ್ಯ ಇರುತ್ತವೆ. 13 ಭಾಷೆಗಳಿಗೆ ಸುಪ್ರೀಂಕೋರ್ಟ್ ರಿಜಿಸ್ಟರಿ ತೀರ್ಪುಗಳನ್ನು ಭಾಷಾಂತರ ಮಾಡಿದೆ.
ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ. ಮರಾಠಿ ಸೇರಿದಂತೆ 13 ಭಾಷೆಗಳಿಗೆ ತೀರ್ಪುಗಳನ್ನು ಭಾಷಾಂತರ ಮಾಡಲಾಗಿದೆ. ಹಿಂದಿ ಭಾಷೆಯಲ್ಲಿ 1,091 ತೀರ್ಪುಗಳು ಲಭ್ಯ ಇವೆ. ಕನ್ನಡದಲ್ಲಿ 17, ತಮಿಳುನಲ್ಲಿ 52, ತೆಲುಗಿನಲ್ಲಿ 28 ತೀರ್ಪುಗಳು ಲಭ್ಯವಿದ್ದು, ಮಲಯಾಳಂ ಭಾಷೆಯಲ್ಲಿ 36 ತೀರ್ಪುಗಳು ಇವೆ. ಸುಪ್ರೀಂ ಕೋರ್ಟ್ ವೆಬ್ಸೈಟ್ ನಲ್ಲಿ ಭಾಷಾಂತರಿಸಿದ ತೀರ್ಪುಗಳು ಲಭ್ಯ ಇವೆ.