
ಬೆಂಗಳೂರು: ಪೊಲೀಸರು ವಾಟ್ಸಾಪ್ ಮೂಲಕ ನೋಟಿಸ್ ನೀಡುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ. ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ಹೈಕೋರ್ಟ್ ಈ ಆದೇಶ ನೀಡಿದೆ.
ತಮಿಳುನಾಡಿನ ಪವನ್ ಕುಮಾರ್ ಎಂಬಾತನಿಗೆ ಪೊಲೀಸರು ವಾಟ್ಸಾಪ್ ಮೂಲಕ ಆಡುಗೋಡಿ ಠಾಣೆಯ ಪೊಲೀಸರು ನೋಟಿಸ್ ನೀಡಿದ್ದರು. ಐಟಿ ಕಾಯ್ದೆಯ ಸೆಕ್ಷನ್ 66(ಸಿ), 66(ಡಿ) ಅಡಿ ಅವರಿಗೆ ನೋಟಿಸ್ ನೀಡಲಾಗಿತ್ತು.
ಸುಪ್ರೀಂಕೋರ್ಟ್ ಸತ್ಯೇಂದರ್ ಕುಮಾರ್ ಅಂಟಿಲ್ ಪ್ರಕರಣದಲ್ಲಿ ಈ ಕುರಿತಾಗಿ ತೀರ್ಪು ನೀಡಿದೆ. CRPC/BNSS ಅಡಿಯಲ್ಲಿ ಸೂಚಿಸಿರುವಂತೆ ನೋಟಿಸ್ ನೀಡಬೇಕಿದೆ. ವಾಟ್ಸಾಪ್ ಮೂಲಕ ಪೊಲೀಸರು ನೋಟಿಸ್ ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ಆಧರಿಸಿ ಹೈಕೋರ್ಟ್ ಆದೇಶ ನೀಡಿದೆ.
ವಾಟ್ಸಾಪ್ ನೋಟಿಸ್ ರದ್ದುಗೊಳಿಸಿ ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅವರಿಂದ ಪೀಠದಿಂದ ಆದೇಶ ನೀಡಲಾಗಿದೆ.