ದಂಪತಿ ಕಲಹ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಪತಿಗೆ ಛೀಮಾರಿ ಹಾಕಿ, ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದೆ. ಪತ್ನಿಗೆ ಗೌರವ ಕೊಡದೆ ಹೋದಲ್ಲಿ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದೆ. ಪತಿ ವರ್ತನೆ ಮೇಲೆ ನಿಗಾ ಇಡುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಪೀಠವು ಬಿಹಾರದ ರಾಜಧಾನಿ ಪಾಟ್ನಾದ ವ್ಯಕ್ತಿಯೊಬ್ಬನ ಅರ್ಜಿ ವಿಚಾರಣೆ ಮಾಡಿದೆ. ಈ ವೇಳೆ ನ್ಯಾಯಮೂರ್ತಿಗಳು, ಪತಿ ಜೊತೆ ಹೋಗಲು ಸಿದ್ಧವಿದ್ದೀರಾ ಎಂದು ಆ ವ್ಯಕ್ತಿಯ ಪತ್ನಿಗೆ ಕೇಳಿದ್ದಾರೆ. ನಾನು ಹೋಗಲು ಸಿದ್ಧವಿದ್ದೇನೆ. ಆದ್ರೆ ಹಿಂಸೆ ನೀಡಬಾರದೆಂದು ಆಕೆ ಹೇಳಿದ್ದಾಳೆ.
ನಂತ್ರ ಪತಿಗೆ ನೀನು ಎಲ್ಲ ಅರ್ಜಿ ವಾಪಸ್ ಪಡೆಯುತ್ತೀಯಾ ಎಂದು ಕೇಳಿದ್ದಾರೆ. ಇದಕ್ಕೆ ಒಪ್ಪಿದ ಪತಿ, ಪತ್ನಿ ಜೊತೆ ವಾಸಿಸುವ ಭರವಸೆ ನೀಡಿದ್ದಾನೆ. ಪತ್ನಿಯ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳನ್ನು ಹಿಂಪಡೆಯುವುದಾಗಿ ಅಫಿಡವಿಟ್ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ. ಪತಿ ಜೊತೆ ಮತ್ತೆ ಕೆಟ್ಟದಾಗಿ ನಡೆದುಕೊಂಡಲ್ಲಿ ಸೂಕ್ತ ಕ್ರಮಕೈಗೊಳ್ಳುವುದಾಗಿ ಪೀಠ ಎಚ್ಚರಿಸಿದೆ.