2016 ರಲ್ಲಿ 500 ಮತ್ತು 1,000 ರೂಪಾಯಿಗಳ ನೋಟುಗಳನ್ನು ಅಮಾನ್ಯಗೊಳಿಸಿದ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ನವೆಂಬರ್ 24 ಕ್ಕೆ ಮುಂದೂಡಿದೆ.
ಕೇಂದ್ರವು ಅದರ ಕಾರ್ಯವಿಧಾನ ಮತ್ತು ಕಾನೂನು ಅಂಶಗಳನ್ನು ವಿವರಿಸುವ ಅಫಿಡವಿಟ್ ಅನ್ನು ಸಲ್ಲಿಸಲು ವಿಫಲವಾದ ನಂತರ ಅರ್ಜಿದಾರರ ಪರ ವಕೀಲರು ವಿಚಾರಣೆಯನ್ನು ಮುಂದೂಡುವ ಮನವಿಯ ವಿರುದ್ಧ ವಾದಿಸಿದರು. ಸಾಂವಿಧಾನಿಕ ಪೀಠದ ಮುಂದೆ, ಇದು ಎಂದಿಗೂ ಅಂಗೀಕರಿಸಲ್ಪಟ್ಟ ಅಭ್ಯಾಸವಲ್ಲ ಎಂದು ಹೇಳಿದರು.
ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಕೇಂದ್ರದ ಅಫಿಡವಿಟ್ ಸಲ್ಲಿಸಲು ಹೆಚ್ಚಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಕಲಾಪವನ್ನು ಮುಂದೂಡುವಂತೆ ಕೋರಿದ್ದಕ್ಕೆ ವಿಷಾದ ವ್ಯಕ್ತಪಡಿಸಿದರು.
ನವೆಂಬರ್ 8, 2016 ರಂದು 500 ರೂ. ಮತ್ತು 1,000 ರೂ. ಮುಖಬೆಲೆಯ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ತೆಗೆದುಹಾಕುವ ಕೇಂದ್ರದ ಕ್ರಮದ ವಿರುದ್ಧ ಮೂರು ಡಜನ್‌ಗೂ ಹೆಚ್ಚು ಅರ್ಜಿಗಳನ್ನು ಸಲ್ಲಿಸಲಾಗಿದೆ.
ಈ ಕ್ರಮವು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಕಾಯಿದೆ, 1934 ರ ಅಡಿಯಲ್ಲಿ ನಿಗದಿಪಡಿಸಿದ ಕಾನೂನಿಗೆ ವಿರುದ್ಧವಾಗಿದೆ ಎಂದು ಅರ್ಜಿಗಳು ಹೇಳಿವೆ.
ಅರ್ಜಿದಾರರೊಬ್ಬರ ಪರ ಹಾಜರಾದ ಹಿರಿಯ ವಕೀಲ ಶ್ಯಾಮ್ ದಿವಾನ್, ಈ ಮನವಿಯನ್ನು ವಿರೋಧಿಸಿ ಸಂವಿಧಾನ ಪೀಠದ ಮುಂದೆ ವಿಚಾರಣೆಯನ್ನು ಮುಂದೂಡುವುದು ಎಂದಿಗೂ ಅಂಗೀಕರಿಸಲ್ಪಟ್ಟ ಅಭ್ಯಾಸವಲ್ಲ ಎಂದು ಪ್ರತಿಪಾದಿಸಿದರು.
ಸರ್ಕಾರ ಮತ್ತು ಆರ್‌ಬಿಐ ಅಫಿಡವಿಟ್‌ಗಳನ್ನು ಸಲ್ಲಿಸಲು ತಮ್ಮದೇ ಆದ ಸಮಯವನ್ನು ತೆಗೆದುಕೊಳ್ಳಬಹುದು ಆದರೆ ಅರ್ಜಿದಾರರಿಗೆ ವಾದಿಸಲು ಅವಕಾಶ ನೀಡಬೇಕು ಎಂದು ದಿವಾನ್ ಹೇಳಿದರು.
ನವೆಂಬರ್ 8 , 2016 ರಂದು ಪ್ರಧಾನಿ ಮೋದಿ 500 ರೂ. ಮತ್ತು 1,000 ರೂ. ಮುಖಬೆಲೆಯ ನೋಟು ಚಲಾವಣೆ ರದ್ದು ಘೋಷಿಸಿದ್ದರು. ನೋಟು ಅಮಾನೀಕರಣಕ್ಕೆ ಮಂಗಳವಾರ 6 ವರ್ಷವಾಗಿದ್ದು ಕಾಂಗ್ರೆಸ್ ನ ರಾಹುಲ್ ಗಾಂಧಿ ಡಿಮಾನಿಟೈಸೇಷನ್ ಉದ್ದೇಶಪೂರ್ವಕ ಕ್ರಮವಾಗಿದೆ ಎಂದು ವಾಗ್ದಾಳಿ ನಡೆಸಿದ್ದರು.