ನವದೆಹಲಿ: ಕ್ರೆಡಿಟ್ ಕಾರ್ಡ್ ಗಳ ಬಾಕಿ ಮೇಲೆ ಬ್ಯಾಂಕುಗಳು ಶೇಕಡ 30ಕ್ಕಿಂತ ಹೆಚ್ಚಿನ ಬಡ್ಡಿ ವಿಧಿಸಬಹುದಾಗಿದೆ ಇಂತಿಷ್ಟೇ ಬಡ್ಡೆ ವಿಧಿಸಬೇಕು ಎಂದು ಕಡ್ಡಾಯ ಮಾಡುವುದು 1949ರ ಬ್ಯಾಂಕಿಂಗ್ ರೆಗ್ಯುಲೇಷನ್ ಕಾಯ್ದೆಯ ಉದ್ದೇಶಕ್ಕೆ ವಿರುದ್ಧವಾದ ನಿಲುವಾಗುತ್ತದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಈ ಮೂಲಕ ವಾರ್ಷಿಕ ಶೇಕಡ 30ಕ್ಕಿಂತ ಹೆಚ್ಚಿನ ಬಡ್ಡಿ ವಿಧಿಸಬಾರದು, ಹಾಗೆ ಮಾಡುವುದು ಗ್ರಾಹಕರ ಶೋಷಣೆಯಾಗುತ್ತದೆ ಎಂದು ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗ 16 ವರ್ಷಗಳ ಹಿಂದೆ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ರದ್ದು ಮಾಡಿದೆ.
ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗ ನೀಡಿದ್ದ ತೀರ್ಪು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರದಲ್ಲಿ ಮೂಗು ತೂರಿಸಿದಂತಾಗುತ್ತಿತ್ತು. ಮತ್ತು ಬ್ಯಾಂಕು – ಗ್ರಾಹಕರ ಮಧ್ಯ ನಡೆದ ಒಪ್ಪಂದದ ಕರಾರುಗಳನ್ನು ಬದಲಿಸಲು ಆಯೋಗಕ್ಕೆ ಅಧಿಕಾರವಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಹಾಗೂ ಸತೀಶ್ ಚಂದ್ರಶರ್ಮ ಅವರಿದ್ದ ಪೀಠ ತೀರ್ಪು ನೀಡಿದೆ.