alex Certify ಶುಭ ಸುದ್ದಿ: ಪ್ರತಿ ತಿಂಗಳು ಮಗುವಿನ ಶಿಕ್ಷಣಕ್ಕೆ 2 ಸಾವಿರ ರೂ. ನೀಡಲು ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶುಭ ಸುದ್ದಿ: ಪ್ರತಿ ತಿಂಗಳು ಮಗುವಿನ ಶಿಕ್ಷಣಕ್ಕೆ 2 ಸಾವಿರ ರೂ. ನೀಡಲು ಸೂಚನೆ

ನವದೆಹಲಿ: ಕೊರೋನಾ ಸಂದರ್ಭದಲ್ಲಿ ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಇದ್ದ ಈಗ ಪೋಷಕರೊಂದಿಗೆ ಇರುವ ಪ್ರತಿ ಮಗುವಿನ ಶಿಕ್ಷಣಕ್ಕೆ ಪ್ರತಿ ತಿಂಗಳು 2000 ರೂ. ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.

ಈ ಕುರಿತು ಎಲ್ಲಾ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನಿಂದ ಸೂಚನೆ ನೀಡಲಾಗಿದ್ದು, ಕೊರೋನಾ ಸಂದರ್ಭದಲ್ಲಿ ಮಕ್ಕಳ ಪಾಲನೆ ಕೇಂದ್ರಗಳಲ್ಲಿ ಮತ್ತು ಈಗ ಪೋಷಕರೊಂದಿಗೆ ಇರುವ ಪ್ರತಿ ಮಗುವಿನ ಶಿಕ್ಷಣದ 2 ಸಾವಿರ ರೂಪಾಯಿಯನ್ನು ಪ್ರತಿತಿಂಗಳು ನೀಡುವಂತೆ ತಿಳಿಸಲಾಗಿದೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳ ಶಿಫಾರಸಿನಂತೆ ಅನೇಕ ಮಕ್ಕಳು ಈಗಲೂ ಪಾಲನಾ ಕೇಂದ್ರಗಳಿಗೆ ಇದ್ದಾರೆ. ಪಾಲನಾ ಕೇಂದ್ರಗಳಿಗೆ ಪುಸ್ತಕ, ಸ್ಟೇಷನರಿ ಸಾಮಗ್ರಿ ಸೇರಿದಂತೆ ಅಗತ್ಯವಿರುವ ಮೂಲಸೌಕರ್ಯಗಳನ್ನು 30 ದಿನಗಳ ಒಳಗೆ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ.

ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರರಾವ್ ಮತ್ತು ಹೇಮಂತ್ ಗುಪ್ತ ಹಾಗೂ ಅಜಯ್ ರಸ್ತೋಗಿ ಅವರುಗಳಿದ್ದ ನ್ಯಾಯಪೀಠ ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಪ್ರಕರಣ ವಿಚಾರಣೆ ವೇಳೆ ಮಕ್ಕಳಿಗೆ ಪ್ರತಿ ತಿಂಗಳು 2000 ರೂಪಾಯಿ ನೀಡಲು ಸೂಚಿಸಿದೆ ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...