ನವದೆಹಲಿ: ಗ್ಯಾಂಗ್ ಸ್ಟರ್ ಅಬುಸಲೇಂ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಮುಂಬೈ ಸರಣಿ ಬಾಂಬ್ ಸ್ಪೋಟದ ಅಪರಾಧಿಯಾಗಿರುವ ಅಬುಸಲೇಂ ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.
ಸಂವಿಧಾನದ 72ನೇ ವಿಧಿಯಡಿ ಜೈಲಿನಿಂದ ಬಿಡುಗಡೆ ಮಾಡುವಂತೆ ರಾಷ್ಟ್ರಪತಿಗಳಿಗೆ ಸುಪ್ರೀಂಕೋರ್ಟ್ ನಿಂದ ಶಿಫಾರಸು ಮಾಡಲಾಗಿದೆ. ಪೋರ್ಚುಗಲ್ ದೇಶಕ್ಕೆ ನೀಡಿದ ಭರವಸೆಗೆ ಕೇಂದ್ರ ಸರ್ಕಾರ ಬದ್ಧವಾಗಿರಬೇಕು ಎಂದು ಹೇಳಲಾಗಿದೆ.
ಅಬುಸಲೇಂ 25 ವರ್ಷ ಜೈಲು ಶಿಕ್ಷೆ ಪೂರೈಸಿದ ಒಂದು ತಿಂಗಳೊಳಗೆ ಅಗತ್ಯ ದಾಖಲೆ ಪತ್ರಗಳನ್ನು ರಾಷ್ಟ್ರಪತಿಗೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. ಕೇಂದ್ರ ಸರ್ಕಾರ ಬದ್ಧವಾಗಿರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. 2002 ರಲ್ಲಿ ಪೋರ್ಚುಗಲ್ ದೇಶದಿಂದ ಅಬುಸಲೇಂ ಗಡಿಪಾರು ಮಾಡಲಾಗಿತ್ತು. ಗಲ್ಲು ಶಿಕ್ಷೆ ನೀಡುವುದಿಲ್ಲವೆಂದು ಕೇಂದ್ರ ಸರ್ಕಾರದಿಂದ ಪೋರ್ಚುಗಲ್ ಗೆ ತಿಳಿಸಲಾಗಿದೆ. ಅಬುಸಲೇಂನ ಜೈಲು ಶಿಕ್ಷೆಯನ್ನು ವಿಸ್ತರಿಸದಂತೆ ಸುಪ್ರೀಂ ಕೋರ್ಟ್ ಭಾರತ ಸರ್ಕಾರಕ್ಕೆ ತಿಳಿಸಿದೆ.
ಅಬು ಸಲೇಂನನ್ನು ಹಸ್ತಾಂತರಿಸುವ ಸಂದರ್ಭದಲ್ಲಿ ಪೋರ್ಚುಗಲ್‌ಗೆ ನೀಡಿದ ಬದ್ಧತೆಯನ್ನು ಗೌರವಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪೀಠ ಸೋಮವಾರ ಸೂಚಿಸಿದ್ದು, ಜೈಲು ಶಿಕ್ಷೆಯನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
2002 ರಲ್ಲಿ ಪೋರ್ಚುಗಲ್ ನ್ಯಾಯಾಲಯಕ್ಕೆ ಭಾರತ ಸರ್ಕಾರ ಅಬುಸಲೇಂನನ್ನು ಹಸ್ತಾಂತರಿಸಲು ಒಪ್ಪಂದ ಮಾಡಿಕೊಂಡಿದ್ದು, 25 ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಶಿಕ್ಷೆ ವಿಧಿಸದ ಬಗ್ಗೆ ಭರವಸೆ ನೀಡಿತ್ತು.
2005 ರಲ್ಲಿ ಸುದೀರ್ಘ ಕಾನೂನು ಹೋರಾಟದ ನಂತರ ಅಬುಸಲೇಂನನ್ನು ಪೋರ್ಚುಗಲ್ ನಿಂದ ಹಸ್ತಾಂತರಿಸಲಾಯಿತು. 1993 ರ ಮುಂಬೈ ರೈಲು ಸ್ಫೋಟ ಮತ್ತು ಉದ್ಯಮಿಯೊಬ್ಬರನ್ನು ಹತ್ಯೆಗೈದ ಪ್ರಕರಣದಲ್ಲಿ ಆತನನ್ನು ಅಪರಾಧಿ ಎಂದು ಘೋಷಿಸಲಾಗಿದೆ.