ಧಾರವಾಡ: ಅನಧಿಕೃತ ಮೈಕ್ ಗಳ ತೆರವಿಗೆ ರಾಜ್ಯ ಸರ್ಕಾರ ಗಡುವು ನೀಡಿದ ಹಿನ್ನೆಲೆಯಲ್ಲಿ ಸುಪ್ರಭಾತ ಅಭಿಯಾನವನ್ನು ಶ್ರೀರಾಮಸೇನೆ ಸಂಘಟನೆ ಹಿಂಪಡೆದುಕೊಂಡಿದೆ.
ಸಂಘಟನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಧಾರವಾಡದಲ್ಲಿ ಈ ಬಗ್ಗೆ ಮಾತನಾಡಿ ಮಾಹಿತಿ ನೀಡಿದ್ದಾರೆ. ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸುವುದು ಸ್ವಾಗತಾರ್ಹವಾಗಿದೆ ಎಂದು ಹೇಳಿದ್ದಾರೆ.
ಮಸೀದಿಗಳಲ್ಲಿ ಮೈಕ್ ಬಳಸಿ ದೊಡ್ಡ ಶಬ್ದಗಳಲ್ಲಿ ಆಜಾನ್ ಮಾಡುವುದನ್ನು ವಿರೋಧಿಸಿ ದೇವಾಲಯಗಳಲ್ಲಿ ಸುಪ್ರಭಾತ ಅಭಿಯಾನ ಕೈಗೊಳ್ಳಲಾಗಿತ್ತು. ಸರ್ಕಾರ ಅನಧಿಕೃತ ಮೈಕ್ ಗಳ ತೆರವಿಗೆ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಸುಪ್ರಭಾತ ಅಭಿಯಾನ ಕೈಬಿಡಲಾಗಿದೆ ಎಂದು ಹೇಳಲಾಗಿದೆ.