ಬೆಂಗಳೂರು: ಆಜಾನ್ ಗೆ ಪ್ರತಿಯಾಗಿ ಇಂದು ಎಲ್ಲೆಡೆ ದೇವಾಲಯಗಳಲ್ಲಿ ಮೈಕ್ ಗಳಲ್ಲಿ ಸುಪ್ರಭಾತ, ಹನುಮಾನ್ ಚಾಲೀಸ, ಭಜನೆ, ಶಂಖ, ಜಾಗಟೆಯ ಸದ್ದು ಮೊಳಗಿದೆ.
ಸುಪ್ರೀಂಕೋರ್ಟ್ ಆದೇಶ, ನಿಯಮ ಉಲ್ಲಂಘಿಸಿ ಮಸೀದಿಗಳಲ್ಲಿ ಹೆಚ್ಚಿನ ಶಬ್ದದೊಂದಿಗೆ ಆಜಾನ್ ಮಾಡುತ್ತಿದ್ದು, ಶಬ್ಧ ಕಡಿಮೆ ಮಾಡಬೇಕೆಂದು ಹಿಂದೂಪರ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿದ್ದರೂ, ಸರ್ಕಾರ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಆಜಾನ್ ಗೆ ಪ್ರತಿಯಾಗಿ ಇಂದು ಹಿಂದೂ ದೇವಾಲಯಗಳಲ್ಲಿ ಶ್ರೀರಾಮಸೇನೆ ಸೇರಿದಂತೆ ವಿವಿಧ ಹಿಂದೂ ಪರ ಸಂಘಟನೆಗಳ ನೇತೃತ್ವದಲ್ಲಿ ಸುಪ್ರಭಾತ, ಹನುಮಾನ್ ಚಾಲೀಸ, ಭಜನೆ ಮಾಡಲಾಗಿದೆ.
ಬೆಳಗ್ಗೆ ಆಜಾನ್ ವೇಳೆಯಲ್ಲಿ ಹಿಂದೂ ಕಾರ್ಯಕರ್ತರು ಸುಪ್ರಭಾತ ಮಾಡಿದ್ದಾರೆ. ಮೈಸೂರಿನ ಶಿವರಾಮ್ ಪೇಟೆಯ ಆಂಜನೇಯಸ್ವಾಮಿ ದೇವಾಲಯದಲ್ಲಿ ಆಜಾನ್ ಗೆ ಮೊದಲು ಪೂಜೆ ಸಲ್ಲಿಸಲಾಗಿದೆ. ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಪೂಜೆ ನೆರವೇರಿಸಿದ್ದಾರೆ. ರಾಜ್ಯದ ವಿವಿಧೆಡೆ ದೇವಾಲಯಗಳಲ್ಲಿ ಮೈಕ್ ಗಳನ್ನು ಕಟ್ಟಿ ಪೂಜೆಯೊಂದಿಗೆ ಸುಪ್ರಭಾತ, ಭಜನೆ ಮಾಡಲಾಗಿದೆ.