ನವದೆಹಲಿ: ಕೇಂದ್ರ ಸರ್ಕಾರ ಸೇನೆಯಲ್ಲಿ ನೇಮಕಾತಿಗಾಗಿ ಘೋಷಿಸಿದ ಅಗ್ನಿಪಥ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಕಾರ್ಪೊರೇಟ್ ವಲಯದಿಂದ ಅಗ್ನಿಪಥಕ್ಕೆ ಬೆಂಬಲ ವ್ಯಕ್ತವಾಗಿದೆ. ಸೇನಾ ನೇಮಕಾತಿಯ ಈ ಯೋಜನೆಯ ಬಗ್ಗೆ ಹಲವು ಉದ್ಯಮಿಗಳು ಉದ್ಯೋಗದ ಭರವಸೆ ನೀಡಿದ್ದಾರೆ.
ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ ಮಹೀಂದ್ರಾ, RPG ಗ್ರೂಪ್ ಅಧ್ಯಕ್ಷ ಹರ್ಷ ಗೋಯೆಂಕಾ ಮತ್ತು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್, JSW ಗ್ರೂಪ್ ಅಧ್ಯಕ್ಷ ಸಜ್ಜನ್ ಜಿಂದಾಲ್, ಟಾಟಾ ಸನ್ಸ್ ಚೇರ್ಮನ್ ಚಂದ್ರಶೇಖರನ್, FICCI ಅಧ್ಯಕ್ಷ ಸಂಜೀವf ಮೆಹತಾ ಅವರು ಅಗ್ನಿಪಥ ಯೋಜನೆಯನ್ನು ಬೆಂಬಲಿಸಿದ್ದಾರೆ.
ಇದಲ್ಲದೆ ವಿವಿಧ ಸಚಿವಾಲಯಗಳು, ಸರ್ಕಾರಿ ಸಂಸ್ಥೆಗಳು ಮೀಸಲಾತಿ ಸೇರಿದಂತೆ ನಾನಾ ಸೌಲಭ್ಯಗಳನ್ನು ಘೋಷಿಸಿವೆ. ಸೇನೆಯಲ್ಲಿ ಯುವಕರು ನಾಲ್ಕು ವರ್ಷ ಸೇವೆ ಸಲ್ಲಿಸುವುದರಿಂದ ಅವರಲ್ಲಿ ಶಿಸ್ತು, ಕೌಶಲ್ಯ ಬೆಳೆಯುತ್ತದೆ. ಇದರಿಂದ ಸೇನೆಯಲ್ಲಿ ಸೇವಾವಧಿ ಮುಗಿಸಿ ಬಂದವರಿಗೆ ಖಾಸಗಿ ಕಂಪನಿಗಳಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ನೇಮಕಾತಿಗೆ ಅರ್ಹತೆ ಅವಕಾಶ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.