ಕಳೆದ ಕೆಲವು ದಿನಗಳಿಂದ ಮಾವಿನ ಹಣ್ಣಿನ ಪೂರೈಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪುಣೆಯ ಗುಲ್ತೇಕ್ಡಿ ಮಾರುಕಟ್ಟೆಯಲ್ಲಿ ಶೇ.25 ರಷ್ಟು ದರ ಇಳಿಕೆಯಾಗಿದೆ.
ಕಳೆದ ವಾರ ಅನಿರೀಕ್ಷಿತ ಮಳೆಯಿಂದಾಗಿ ರೈತರು ತಾವು ಬೆಳೆದ ಮಾವಿನ ಹಣ್ಣನ್ನು ಮಾರುಕಟ್ಟೆಗೆ ತರಲು ಹಿಂದೇಟು ಹಾಕಿದ್ದರು. ಇದರಿಂದ ಹಣ್ಣುಗಳ ರಾಜನೆನಿಸಿರುವ ಮಾವಿಗೆ ಉತ್ತಮ ಬೆಲೆ ಸಿಕ್ಕಿತ್ತು. ಆದರೆ, ಮಳೆ ನಿಂತಿರುವುದರಿಂದ ಕಳೆದ ಕೆಲವು ದಿನಗಳಿಂದ ಮಾವಿನ ಹಣ್ಣಿನ ಪೂರೈಕೆಯಲ್ಲಿ ಹೆಚ್ಚಳವಾಗಿದ್ದು, ಮಾರುಕಟ್ಟೆಗೆ 10,000 ಬಾಕ್ಸ್ ಗೂ ಅಧಿಕ ಹಣ್ಣು ಬಂದಿದೆ. ಇದರಿಂದ ಬೆಲೆಯಲ್ಲಿ ಶೇ.25 ರಷ್ಟು ಇಳಿಕೆ ಕಂಡುಬಂದಿದೆ.
ಮೇ 3 ರಂದು ಅಕ್ಷಯ ತೃತೀಯ ಇರುವುದರಿಂದ ಹೆಚ್ಚು ಜನರು ಮಾವಿನ ಹಣ್ಣು ತಿನ್ನುವುದಕ್ಕೆ ಆರಂಭಿಸುತ್ತಾರೆ. ಆ ಸಂದರ್ಭದಲ್ಲಿ ಮಾವಿನ ಹಣ್ಣಿನ ಮಾರಾಟದಲ್ಲಿ ಹೆಚ್ಚಳವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಗುಂಡು ಹಾರಿಸಿ 12 ನೇ ತರಗತಿ ವಿದ್ಯಾರ್ಥಿ ಹತ್ಯೆ
ಪುಣೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಕಾರ, ಪುಣೆ ಮಾರುಕಟ್ಟೆಗೆ ಕಳೆದ ಜನವರಿಯಲ್ಲಿ ಅಲ್ಫೋನ್ಸಾ ಮಾವಿನ ಮೊದಲ ಬಾಕ್ಸ್ ಬಂದಿತ್ತು. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾವು ಪೂರೈಕೆ ಕಡಿಮೆಯಾಗಿದೆ. ಇದುವರೆಗೆ ಕೊಂಕಣ ಬಾಗ ಮತ್ತು ದೇಶದ ವಿವಿಧೆಡೆಗಳಿಂದ ಪ್ರತಿ ವಾರ 4,000 ದಿಂದ 5000 ಬಾಕ್ಸ್ ಮಾತ್ರ ಬರುತ್ತಿದೆ. ಕಳೆದ ವಾರ ಕೊಂಕಣ ಪ್ರದೇಶದಲ್ಲಿ ಮಳೆ ಬಿದ್ದಿದ್ದರಿಂದ ಮಾವು ಪೂರೈಕೆ ಹೆಚ್ಚಳವಾಗಿದ್ದು, 10,000 ಬಾಕ್ಸ್ ಅಲ್ಫೋನ್ಸಾ ಮಾವು ಮಾರುಕಟ್ಟೆಗೆ ಬಂದಿದೆ.
ಪ್ರಸ್ತುತ ರತ್ನಗಿರಿ ಮತ್ತು ದೇವಗಢ ಅಲ್ಫೋನ್ಸಾ ಮಾವಿನ ಹಣ್ಣು 4 ರಿಂದ 6 ಡಜನ್ ಗೆ 2,500 ದಿಂದ 3,000 ರೂಪಾಯಿವರೆಗೆ ಇಳಿಕೆ ಆಗಿದೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಿಂದ ಬರುತ್ತಿರುವ ಮಾವಿನ ಹಣ್ಣಿನ ಬೆಲೆ ಡಜನ್ ಗೆ 600 ರಿಂದ 1,000 ರೂಪಾಯಿಗಳಷ್ಟಿದೆ.