![](https://kannadadunia.com/wp-content/uploads/2023/10/3ad5e410-a635-451e-b88d-374c22d996df.jpg)
ರಂಜಿತ್ ಸಿಂಗ್ ರಜಪೂತ್ ನಿರ್ದೇಶಿಸಿರುವ ‘supplier ಶಂಕರ’ ಚಿತ್ರದ ಟೀಸರ್ ಇದೇ ತಿಂಗಳು ಅಕ್ಟೋಬರ್ 20ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ತ್ರಿನೇತ್ರ ಫಿಲಂಸ್ ಬ್ಯಾನರ್ ನಡಿ ಎಂ ಚಂದ್ರಶೇಖರ್ ಮತ್ತು ನಾಗೇಂದ್ರ ಸಿಂಗ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ನಿಶ್ಚಿತ್ ಕೊರೋಡಿ ಮತ್ತು ದೀಪಿಕಾ ಆರಾಧ್ಯ ನಾಯಕ – ನಾಯಕಿಯಾಗಿದ್ದಾರೆ.
ಗೋಪಾಲಕೃಷ್ಣ ದೇಶಪಾಂಡೆ ಸೇರಿದಂತೆ ನವೀನ್ ಡಿ, ಜ್ಯೋತಿ ರಾಯ್, ವಿಜಯ್ ವಿಶ್ವನಾಥ್ ತೆರೆ ಹಂಚಿಕೊಂಡಿದ್ದಾರೆ. ಸತೀಶ್ ಕುಮಾರ್ ಛಾಯಾಗ್ರಹಣವಿದ್ದು ಭರತ್ ಸಂಗೀತ ಸಂಯೋಜನೆ ನೀಡಿದ್ದಾರೆ.
![](https://kannadadunia.com/wp-content/uploads/2023/10/0e6dc46c-a1c6-40aa-8358-59e404f188fd.jpg)