
ರಂಜಿತ್ ಸಿಂಗ್ ರಜಪೂತ್ ನಿರ್ದೇಶನದ ಲವ್ ಸ್ಟೋರಿ ಆಕ್ಷನ್ ಕಾಮಿಡಿ ಕಥಾಂದರ ಹೊಂದಿರುವ ‘ಸಪ್ಲೇಯರ್ ಶಂಕರ’ ಚಿತ್ರದ ಮೇಕಿಂಗ್ ವಿಡಿಯೋ ಒಂದನ್ನು ನಿನ್ನೆ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಗಳಿಸಿದೆ.ಸಾಹಸ ದೃಶ್ಯಗಳನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ.
ತ್ರಿನೇತ್ರ ಫಿಲಂಸ್ ಬ್ಯಾನರ್ ನಡಿ ಎಂ ಚಂದ್ರಶೇಖರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ನಿಶ್ಚಿತ್ ಕೊರೋಡಿ ಹಾಗೂ ದೀಪಿಕಾ ಆರಾಧ್ಯ ಮುಖ್ಯ ಭೂಮಿಕೆಯಲ್ಲಿದ್ದಾರೆ.
ಆರ್ ಬಿ ಭರತ್ ಸಂಗೀತ ಸಂಯೋಜನೆ ನೀಡಿರುವ ಈ ಸಿನಿಮಾದ ಶೂಟಿಂಗ್ ಈಗಾಗಲೇ ಕಂಪ್ಲೀಟ್ ಆಗಿದ್ದು, ತೆರೆ ಮೇಲೆ ಬರಲು ಸಜ್ಜಾಗಿದೆ.