ದೆಹಲಿ: ನಗರದ ಲಕ್ಷಾಂತರ ಜನರಿಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ದೆಹಲಿಯ ಅಲಗ್ ನಟರಾಜನ್ ಅಕಾ ‘ಮಟ್ಕಾ ಮ್ಯಾನ್’ಗಾಗಿ ಆನಂದ್ ಮಹೀಂದ್ರಾ ಅವರು ಮೆಚ್ಚುಗೆಯ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಪಂಚಶೀಲ ಪಾರ್ಕ್ ನಿವಾಸಿಯಾದ ನಟರಾಜನ್ ಅವರು ಪ್ರತಿದಿನ ತಮ್ಮ ಎಸ್‌ಯುವಿಯಲ್ಲಿ ಸಂಚರಿಸುತ್ತಾರೆ. ದಕ್ಷಿಣ ದೆಹಲಿಯಾದ್ಯಂತ ಶುದ್ಧ ಕುಡಿಯುವ ನೀರನ್ನು ಮಣ್ಣಿನ ಮಡಕೆಗಳಿಗೆ ತುಂಬುತ್ತಾರೆ. “ಮಟ್ಕಾ ಎಂಬುದು ಭಾರತೀಯ ಮಣ್ಣಿನ ಮಡಕೆಯಾಗಿದ್ದು, ಸಾಂಪ್ರದಾಯಿಕವಾಗಿ ನೀರನ್ನು ಶೇಖರಿಸಿಡಲು ಮತ್ತು ತಣ್ಣಗಾಗಲು ಬಳಸಲಾಗುತ್ತದೆ” ಎಂದು ಅವರು ತಮ್ಮ ವೆಬ್‌ಸೈಟ್‌ನಲ್ಲಿ ವಿವರಿಸಿದ್ದಾರೆ. ‘ಬಡ ಜನರಿಗೆ ಕುಡಿಯುವ ನೀರು ಒದಗಿಸಲು ನಾನು ಮಟ್ಕಾಗಳನ್ನು ಬಳಸುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಸುರಕ್ಷಿತ ಸರ್ಕಾರಿ ಹೂಡಿಕೆ ಯೋಜನೆ ’ಪಿಪಿಎಫ್ʼ ಖಾತೆ ತೆರೆಯಲು ಇಲ್ಲಿದೆ ಟಿಪ್ಸ್
ಮೊದಲಿಗೆ ಅವರ ಮನೆಯ ಹೊರಗೆ ಒಂದು ಮಣ್ಣಿನ ಮಡಕೆಯಲ್ಲಿ ನೀರು ಇಡಲಾಗುತ್ತಿತ್ತು. ಇದೀಗ ದಕ್ಷಿಣ ದೆಹಲಿಯಾದ್ಯಂತ ಮಟ್ಕಾಗಳನ್ನು ಇರಿಸುವ ಉದ್ದೇಶವಾಗಿ ಮಾರ್ಪಟ್ಟಿದೆ. ಅವರ ಈ ಸಾಮಾಜಿಕ ಕಳಕಳಿಯು ನಟರಾಜನಿಗೆ ‘ಮಟ್ಕಾ ಮ್ಯಾನ್’ ಎಂಬ ಖ್ಯಾತಿಯನ್ನು ತಂದುಕೊಟ್ಟಿದೆ. ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಾರ, ನಟರಾಜನ್ ಪ್ರತಿದಿನ ಬೆಳಿಗ್ಗೆ ಐದು ಗಂಟೆ ವೇಳೆಗೆ ಸುಮಾರು 70 ರಿಂದ 80 ಮಡಕೆ ನೀರನ್ನು ತುಂಬುತ್ತಾರೆ. ಇದರಿಂದ ಜನರು ಉಚಿತವಾಗಿ ನೀರು ಕುಡಿಯಬಹುದು.
‘ಇಡೀ ಮಾರ್ವೆಲ್ ಸ್ಟೇಬಲ್ ಗಿಂತ ಶಕ್ತಿಶಾಲಿ ಸೂಪರ್ ಹೀರೋ’ ಎಂದು ಮಹಿಂದ್ರಾ ಗ್ರೂಪ್ ನ ಅಧ್ಯಕ್ಷ ಆನಂದ್ ಮಹೀಂದ್ರಾ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಮಹೀಂದ್ರ ಬೊಲೆರೊ ಎಸ್‌ಯುವಿಯನ್ನು ತನ್ನ ಉದಾತ್ತ ಕೆಲಸಕ್ಕಾಗಿ ಆಯ್ಕೆ ಮಾಡಿದ್ದಕ್ಕಾಗಿ ನಟರಾಜನಿಗೆ ಅವರು ಧನ್ಯವಾದ ಅರ್ಪಿಸಿದ್ದಾರೆ.
ಭಾರಿ ಮಳೆಯಿಂದ ತತ್ತರಿಸಿದವರಿಗೆ ಶಾಕಿಂಗ್ ನ್ಯೂಸ್: 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
ಅಲ್ಲದೆ, ಮೂರು ದಶಕಗಳ ಕಾಲ ಲಂಡನ್‌ನಲ್ಲಿ ಕಳೆದ ನಟರಾಜನ್, ನಂತರ ಬಡವರ ಸೇವೆಗಾಗಿ ತಮ್ಮ ಊರಿಗೆ ಮರಳಿದ್ದಕ್ಕಾಗಿ ಆನಂದ್ ಮಹೀಂದ್ರಾ ಶ್ಲಾಘಿಸಿದ್ದಾರೆ. ಪೋಸ್ಟ್ ಜೊತೆಗೆ ಕೈಗೋರಿಕೋದ್ಯಮಿ ಆನಂದ್ ಮಹೀಂದ್ರಾ ವಿಡಿಯೋ ಕೂಡ ಹಂಚಿಕೊಂಡಿದ್ದಾರೆ. ಈ ಟ್ವೀಟ್ ವೈರಲ್ ಆಗಿದ್ದು, ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ದೆಹಲಿ ನಿವಾಸಿಗಳಿಗೆ ನೀರನ್ನು ಒದಗಿಸುವುದರ ಜೊತೆಗೆ ನಟರಾಜನ್ ಅವರು ವಾರಕ್ಕೆ ಎರಡು ಅಥವಾ ಮೂರು ಬಾರಿ ಕಟ್ಟಡ ಕಾರ್ಮಿಕರಿಗೆ ಆಹಾರವನ್ನು ಕೂಡ ಒದಗಿಸುತ್ತಾರೆ.