ಡಿಸೆಂಬರ್ 29 ರ ಭಾನುವಾರದಂದು ಶಿವಮೊಗ್ಗ ನಗರದ ಪ್ರತಿಷ್ಠಿತ ಸಿಟಿ ಕೋ – ಆಪರೇಟಿವ್ ಬ್ಯಾಂಕ್ ಗೆ ಚುನಾವಣೆ ನಡೆಯಲಿದ್ದು, ಇದೀಗ ಅಭ್ಯರ್ಥಿಗಳಿಗೆ ಚಿಹ್ನೆ ನೀಡಲಾಗಿದೆ.
ಈ ಚುನಾವಣೆಯಲ್ಲಿ ಮರಾಠ ಸಮಾಜದ ಪ್ರಮುಖರು ಹಾಗೂ SRS ಬೋರ್ ಮಾಲೀಕರಾದ ಎಸ್. ಸುನಿಲ್ ಕುಮಾರ್ ಸ್ಪರ್ಧಿಸಿದ್ದು, ಅವರಿಗೆ ಕ್ರಮ ಸಂಖ್ಯೆ – 28, ಶಟಲ್ ಕಾಕ್ ಚಿಹ್ನೆ ನೀಡಲಾಗಿದೆ.
ಈ ಚುನಾವಣೆಯಲ್ಲಿ ತಮ್ಮ ಚಿಹ್ನೆಯಾದ ಕ್ರಮ ಸಂಖ್ಯೆ 28 ರ ʼಶಟಲ್ ಕಾಕ್ʼ ಗುರುತಿಗೆ ಮತ ನೀಡುವ ಮೂಲಕ ಬೆಂಬಲಿಸುವಂತೆ ಸಿಟಿ ಕೋ – ಆಪರೇಟಿವ್ ಬ್ಯಾಂಕ್ ಸದಸ್ಯರಲ್ಲಿ ಮನವಿ ಮಾಡಿರುವ ಸುನಿಲ್ ಕುಮಾರ್, ತಾವು ಆಯ್ಕೆಯಾದರೆ ಷೇರುದಾರರ ಹಿತ ಕಾಪಾಡಲು ಶ್ರಮಿಸುವುದಾಗಿ ತಿಳಿಸಿದ್ದಾರೆ.
ಸಿಟಿ ಕೋ – ಆಪರೇಟಿವ್ ಬ್ಯಾಂಕ್ ಚುನಾವಣೆಯು ಡಿಸೆಂಬರ್ 29 ರ ಭಾನುವಾರ ಶಿವಮೊಗ್ಗ ನಗರದ ನ್ಯಾಷನಲ್ ಬಾಯ್ಸ್ ಹೈಸ್ಕೂಲ್ ಆವರಣದಲ್ಲಿ ನಡೆಯಲಿದ್ದು, ಬೆಳಿಗ್ಗೆ 9:00 ರಿಂದ ಸಂಜೆ 4:00 ಗಂಟೆಯವರೆಗೆ ಮತದಾನ ಪ್ರಕ್ರಿಯೆ ಇರುತ್ತದೆ.