ಬೆಂಗಳೂರು: ಐಟಿಐ ಪೂರ್ಣಗೊಳಿಸಿದವರಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ವಿದ್ಯುತ್ ಸರಬರಾಜು ಕಂಪನಿ(ಎಸ್ಕಾಂ)ಗಳಲ್ಲಿ ಉದ್ಯೋಗ ಅವಕಾಶ ಕಲ್ಪಿಸುವುದಾಗಿ ಇಂಧನ ಸಚಿವ ವಿ. ಸುನಿಲ್ ಕುಮಾರ್ ಭರವಸೆ ನೀಡಿದ್ದಾರೆ.
ಬಿಜೆಪಿ ಸದಸ್ಯ ಭೂಸನೂರ ರಮೇಶ ಬಾಳಪ್ಪ ವಿಷಯ ಪ್ರಸ್ತಾಪಿಸಿ, ಎಸ್ಎಸ್ಎಲ್ಸಿ ಪಾಸಾದವರನ್ನು ಮಾತ್ರ ಸಹಾಯಕ ಪವರ್ ಮ್ಯಾನ್, ಸ್ಟೇಷನ್ ಅಟೆಂಡೆಂಟ್ ದರ್ಜೆ -2, ಸಹಾಯಕರ ಹುದ್ದೆಗಳಿಗೆ ಪರಿಗಣಿಸುತ್ತಿದ್ದು, ಪರಿಗಣಿಸುತ್ತಿಲ್ಲ ಎಂದು ತಿಳಿಸಿದ್ದಾರೆ.
ಇದಕ್ಕೆ ಉತ್ತರಿಸಿದ ಸಚಿವ ಸುನಿಲ್ ಕುಮಾರ್, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಸಹಾಯಕ ಪವರ್ ಮ್ಯಾನ್, ಸ್ಟೇಷನ್ ಅಟೆಂಡೆಂಟ್ ದರ್ಜೆ -2, ಹೆಲ್ಪರ್ ಮತ್ತು ಸಮಾನಾಂತರ ಹುದ್ದೆಗಳಿಗೆ ನೇಮಕಾತಿ ಸಂದರ್ಭದಲ್ಲಿ ಪೂರ್ಣಗೊಳಿಸಿದವರಿಗೆ ಅವಕಾಶ ನೀಡಿ ನ್ಯಾಯ ಒದಗಿಸಲಾಗುತ್ತದೆ. ಮುಂದಿನ ನೇಮಕಾತಿಯಲ್ಲಿ ಪಾಸಾದವರನ್ನು ಪರಿಗಣಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.