ಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸುನಿಲ್ ಬೋಸ್ ಇಂದು ನಾಮಪತ್ರ ಸಲ್ಲಿಸಿದರು. ಸುನಿಲ್ ಬೋಸ್ ನಾಮಪತ್ರ ಸಲ್ಲಿಕೆಗೂ ಮುನ್ನ ನಡೆದ ಬೃಹತ್ ರ್ಯಾಲಿಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವ ಮಹದೇವಪ್ಪ ಮತ್ತಿತರಿದ್ದರು.
ಅದೇ ರೀತಿ ಕೊಡಗು – ಮೈಸೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಇಂದು ನಾಮಪತ್ರ ಸಲ್ಲಿಸಿದರು. ಒಕ್ಕಲಿಗ ಸಮಾಜದ ಸಾಮಾನ್ಯ ಕುಟುಂಬದಿಂದ ಬಂದಿರುವ ಲಕ್ಷಣ್ ಅವರು ತಮ್ಮ ಹೋರಾಟದ ಮನೋಭಾವ, ಪಕ್ಷ ನಿಷ್ಠೆ ಮತ್ತು ಜನಾನುರಾಗಿ ವ್ಯಕ್ತಿತ್ವದಿಂದಾಗಿ ಇಂದು ಈ ಹಂತದ ವರೆಗೆ ಬೆಳೆದಿದ್ದಾರೆ. ಲಕ್ಷ್ಮಣ್ ಮೈಸೂರಿನ ಮನೆಮಗ, ನಮ್ಮ ನಿಮ್ಮೆಲ್ಲರ ಧ್ವನಿ, ಸಂಸತ್ತಿನಲ್ಲಿ ನಮ್ಮ ಧ್ವನಿ ಮೊಳಗಬೇಕಾದರೆ ಲಕ್ಷ್ಮಣ್ ಬೆಂಬಲಕ್ಕೆ ಕ್ಷೇತ್ರದ ಮತದಾರರು ನಿಲ್ಲಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.