ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಆಥಿಯಾ ಶೆಟ್ಟಿ ಪ್ರಣಯಪಕ್ಷಿಗಳು. ಈ ಪ್ರಣಯಪಕ್ಷಿಗಳು ಕ್ರಿಕೆಟ್ ಅಂಗಳ ಸೇರಿದಂತೆ ಬಾಲಿವುಡ್ ನಲ್ಲಿ ಆಗಾಗ್ಗೆ ಹೆಡ್ ಲೈನ್ ಆಗ್ತಾರೆ. ಇವರಿಬ್ಬರ ಮದುವೆ ಯಾವಾಗ ಅನ್ನೋ ಪ್ರಶ್ನೆಗೆ ನಟ ಸುನಿಲ್ ಶೆಟ್ಟಿ ಉತ್ತರಿಸಿದ್ದಾರೆ.
ಕ್ರಿಕೆಟಿಗ ಕೆಎಲ್ ರಾಹುಲ್ ಅವರ ಮಗಳು-ನಟಿ ಅಥಿಯಾ ಶೆಟ್ಟಿ ಅವರ ವಿವಾಹ ಶೀಘ್ರದಲ್ಲೇ ನಡೆಯಲಿದೆ ಎಂದು ಆಥಿಯಾ ಶೆಟ್ಟಿ ತಂದೆ ನಟ ಸುನೀಲ್ ಶೆಟ್ಟಿ ಖಚಿತಪಡಿಸಿದ್ದಾರೆ. ಸುನೀಲ್ ಅವರ ಕ್ರೈಮ್ ಥ್ರಿಲ್ಲರ್ ಸರಣಿಯ ಧಾರಾವಿ ಬ್ಯಾಂಕ್ನ ಬಿಡುಗಡೆ ಸಮಾರಂಭದಲ್ಲಿ ಅವರನ್ನು ಮಗಳ ಮದುವೆಯ ಬಗ್ಗೆ ಕೇಳಲಾಯಿತು. ಈ ವೇಳೆ ಅವರು ಬೇಗನೇ ಅಗುತ್ತದೆ ಎಂದರು.
ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಕೆಲವು ವರ್ಷಗಳಿಂದ ಒಟ್ಟಿಗೆ ಇದ್ದಾರೆ. ಇಬ್ಬರೂ ಕೆಲವೊಮ್ಮೆ ಪ್ರವಾಸಗಳಿಗೆ ಹೋಗುತ್ತಾ ಒಟ್ಟಿಗೆ ವಿಹರಿಸುತ್ತಾರೆ. ಆಥಿಯಾ ಮತ್ತು ಕೆಎಲ್ ರಾಹುಲ್ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದಾರೆ. ಕೆ. ಎಲ್. ರಾಹುಲ್ 2021 ರಲ್ಲಿ ಆಥಿಯಾ ಶೆಟ್ಟಿ ಸಹೋದರ ಅಹಾನ್ ಶೆಟ್ಟಿ ಅವರ ಚೊಚ್ಚಲ ಚಿತ್ರ ತಡಾಪ್ನ ಪ್ರೀಮಿಯರ್ ಶೋಗೆ ಹಾಜರಾಗಿದ್ದರು. ಈವೆಂಟ್ನಲ್ಲಿ ಆಥಿಯಾ ಮತ್ತು ಕೆ.ಎಲ್. ರಾಹುಲ್ ಒಟ್ಟಿಗೆ ಪೋಸ್ ನೀಡಿದ್ದರು. ಕೆ.ಎಲ್. ರಾಹುಲ್ ಅವರ ಕ್ರಿಕೆಟ್ ಪಂದ್ಯಗಳಲ್ಲಿ ಸುನಿಲ್ ಶೆಟ್ಟಿ ಕೂಡ ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ.