ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತಿಚೆಗೆ ಬಾಲಿವುಡ್ನ ಖ್ಯಾತ ನಟರನ್ನ ಭೇಟಿಯಾಗಿದ್ದಾರೆ. ಈ ವೇಳೆ ಅನೇಕ ವಿಷಯಗಳನ್ನ ಅವರು ಚರ್ಚೆ ಮಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ಯುಪಿಯನ್ನು ’ಭಾರತದ ಅತ್ಯಂತ ಚಲನಚಿತ್ರ ಸ್ನೇಹಿ ರಾಜ್ಯ’ (Most Film Friendly State) ಅನ್ನುವುದರ ಬಗ್ಗೆ ಚರ್ಚೆ ಮಾಡಲಾಗಿದೆ.
ಅಸಲಿಗೆ ಯೋಗಿ ಆದಿತ್ಯನಾತ್ ಯುಪಿಯಲ್ಲಿ ಫಿಲ್ಮ್ಸಿಟಿ ನಿರ್ಮಾಣ ಮಾಡಬೇಕು ಅನ್ನುವುದು ಬಹುದಿನದ ಕನಸಾಗಿದೆ. ಅದಕ್ಕಾಗಿ ಈಗ ಬಾಲಿವುಡ್ನ ದಿಗ್ಗಜರನ್ನ ಭೇಟಿ ಮಾಡುವುದಕ್ಕಂತಾನೇ ಸಮಯವನ್ನ ಮೀಸಲಾಗಿಟ್ಟಿದ್ದಾರೆ. ಈಗಾಗಲೇ ನಟ ಜಾಕಿಶ್ರಾಫ್, ಗಾಯಕ ಕೈಲಾಶ್ಖೇರ್, ಗಾಯಕ ಸೋನು ನಿಗಂ, ನಟ ರವಿ ಕಿಶನ್, ನಿರ್ಮಾಪಕ ಬೋನಿ ಕಪೂರ್ ಹಾಗೂ ನಟ ಸುನೀಲ್ ಶೆಟ್ಟಿಅವರೊಂದಿಗೆ ಮಾತನಾಡಿದ್ದಾರೆ.
ಇದೇ ಸಂದರ್ಭದಲ್ಲಿ ನಟ ಸುನೀಲ್ ಶೆಟ್ಟಿ, ಬಾಲಿವುಡ್ಗೆ ಸಂಬಂಧ ಪಟ್ಟ ಹಾಗೆ ಕೆಲ ಗಂಭೀರ ವಿಚಾರಗಳನ್ನ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮುಂದೆ ಇಟ್ಟಿದ್ದಾರೆ. ಅದರಲ್ಲೂ# ಬಾಯ್ಕಾಟ್ ವಿಷಯ ಕೂಡ. ಇತ್ತಿಚೆಗೆ ಬಾಲಿವುಡ್ನ ಅನೇಕ ಸಿನೆಮಾಗಳು # ಬಾಯ್ಕಾಟ್ ಗೆ ಗುರಿಯಾಗುತ್ತಿದೆ. ಇದರಿಂದ ಕೋಟ್ಯಾಂತರ ರೂಪಾಯಿ ನಷ್ಟವನ್ನ ಅನುಭವಿಸ್ತಿವೆ.
ಈಗ ನಟ ಶಾರುಕ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ಅಭಿನಯದ ’ಪಠಾಣ್’ ಸಿನೆಮಾ ಕೂಡಾ ರಿಲೀಸ್ ಆಗಲಿದೆ. ಈ ಸಿನೆಮಾ ಕೂಡಾ ಬಾಯ್ಕಾಟ್ಗೆ ಟಾರ್ಗೆಟ್ ಆಗುವ ಭಯ ಸಿನೆಮಾ ನಟರು, ನಿರ್ಮಾಪಕರಿಗೆ ಕಾಡ್ತಿದೆ. ಆದ್ದರಿಂದ ಈ # ಬಾಯ್ಕಾಟ್ ಅನ್ನೊ ವಿಷಯವನ್ನೇ ರದ್ದುಪಡಿಸಿ ಎಂದು ಕೇಳಿಕೊಂಡಿದ್ದಾರೆ. ಸಾಧ್ಯವಾದರೆ ಪಿಎಂ ನರೇಂದ್ರ ಮೋದಿಯವರ ಗಮನಕ್ಕೂ ವಿಷಯ ತಂದರೆ ಒಳ್ಳೆಯದು ಎಂದು ವಿನಂತಿಸಿದ್ದಾರೆ.
ಬೋನಿ ಕಪೂರ್ ಕೂಡಾ ಸುನಿಲ್ಶೆಟ್ಟಿ ಮಾತಿಗೆ ಬೆಂಬಲ ಕೊಡುತ್ತ. ಯೋಗಿ ಆದಿತ್ಯನಾಥ್ ಅವರು ಯುಪಿಯನ್ನ ಅಪರಾಧ ಮುಕ್ತರಾಜ್ಯವನ್ನಾಗಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಮುಂಬೈನಂತೆ ಯುಪಿಯಲ್ಲಿಯೂ ಹೆಚ್ಚಿನ ಸಿನೆಮಾಗಳ ಚಿತ್ರಿಕರಣ ನಡೆಯಲಿದೆ ಎಂದು ಹೇಳಿದರು. ಹೀಗೆ ಸಭೆಯಲ್ಲಿ ಇದ್ದವರೆಲ್ಲರೂ ತಮ್ಮ ತಮ್ಮ ಅಭಿಪ್ರಾಯವನ್ನ ಯೋಗಿ ಆದಿತ್ಯನಾಥ್ ಮುಂದೆ ಇಟ್ಟಿದ್ದಾರೆ.
ಈಗ ಉತ್ತರ ಪ್ರದೇಶದಲ್ಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ಹೊಸ ಫಿಲ್ಮ್ ಸಿಟಿ ನಿರ್ಮಾಣ ಮಾಡುವ ಯೋಜನೆ ಆರಂಭವಾಗಲಿದ್ದು, ಇದರಿಂದ ಭವಿಷ್ಯದಲ್ಲಿ ಯುಪಿ ರಾಜ್ಯಕ್ಕೆ ಲಾಭವಾಗಲಿದೆ ಅನ್ನುವ ಲೆಕ್ಕಾಚಾರ ನಡೆಯುತ್ತಿದೆ.