ಬೆಂಗಳೂರು: 6 ಜನ ನಕ್ಸಲರು ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಸಮ್ಮುಖದಲ್ಲಿ ಸರ್ಕಾರದ ಮುಂದೆ ಶರಣಾಗುತ್ತಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿರುವ ಶಾಸಕ ಸುನೀಲ್ ಕುಮಾರ್, ನಕ್ಸಲರು ಸಿಎಂ ಸಿದ್ದರಾಮಯ್ಯಗೆ ಹತ್ತಿರವಾಗಿದ್ದಾರೋ? ಅಥವಾ ನಕ್ಸಲರೇ ಸಿದ್ದರಾಮಯ್ಯ ಬಳಿ ಇದ್ದಾರೋ? ಎಂದು ಪ್ರಶ್ನಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸುನೀಲ್ ಕುಮಾರ್, ಶಾಂತಿಗಾಗಿ ನಾಗರಿಕರು ವೇದಿಕೆ ನಗರದಲ್ಲಿನ ನಕ್ಸಲರು. ಅವರಿಗೆ ನಕ್ಸಲರು ಸಂಪರ್ಕದಲ್ಲಿದ್ದಾರೆ. ಸರ್ಕಾರ ಅವರ ಮೂಲಕವಾಗಿ ಈಗ ನಕ್ಸಲರಿಗೆ ಶರಣಾಗುವಂತೆ ಹೇಳಿ ಸಿಎಂ ಸಿದ್ದರಾಮಯ್ಯ ತಮ್ಮ ಮುಂದೆ ಶರಣಾಗತರನ್ನಾಗಿ ಮಾಡಿಸುತ್ತಿದ್ದಾರೆ. ಬುದ್ಧಿಜೀವಿಗಳ ಮುಖಾಂತರ ಮಾತುಮತೆ ನಡೆಸಿ, ಈಗ ನಕ್ಸಲರನ್ನು ನಾಡಿಗೆ ಕರೆತಂದು ಶರಣಾಗಿಸುವಂತೆ ಮಾಡುತ್ತಿರುವುದು ಎನ್ ಟಿಎಫ್ ಕಾರ್ಯಾಚರಣೆ ಆತ್ಮವಿಶ್ವಾಸವನ್ನು ಕುಗ್ಗಿಸುವ ಯತ್ನ ಎಂದು ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ, ಗೃಹ ಸಚಿವರ ಮುಂದೆ ಶರಣಾಗುವ ಬದಲು ನ್ಯಯಾಲ್ಯದ ಮುಂದೆ ನಕ್ಸಲರು ಶರಣಾಗಲಿ. ನಕ್ಸಲರಿಗೆ ಪ್ಯಾಕೇಜ್ ಕೊಟ್ಟು, ಆರ್ಥಿಕ ನೆರವು ನೀಡಿ ಈ ರೀತಿ ಶರಣಾಗತಿ ಸರ್ಕಾರದ ನಡೆ ಅನುಮಾನ ಹುಟ್ಟಿಸುತ್ತಿದೆ. ಕಾಡು ನಕ್ಸಲರನ್ನು ನಾಡು ನಕ್ಸಲರನ್ನಾಗಿಸಲು ಸರ್ಕಾರ ಮುಂದಾಗಿದೆ. ಸಿದ್ದರಾಮಯ್ಯ ಸರ್ಕಾರ ನಕ್ಸಲರಲ್ಲಿ ಆಸೆ ಚಿಗುರುವಂತೆ ಮಾಡುತ್ತಿದೆ. ಹಣ ಕೊಟ್ಟು, ಪ್ಯಾಕೇಜ್ ಕೊಟ್ಟು ಶರಣಾಗತಿ ಎಷ್ಟು ಸರಿ? ನಕ್ಸಲರು ಕೋರ್ಟ್ ಗೆ ಶರಣಾಗಲಿ ನ್ಯಾಯಾಲಯದ ತೀರ್ಪಿಗೆ ಬದ್ಧವಾಗಲಿ ಎಂದು ಆಗ್ರಹಿಸಿದರು.