ನವದೆಹಲಿ: ವಾರದ ರಜಾದಿನವನ್ನು ಭಾನುವಾರದಿಂದ ಶುಕ್ರವಾರಕ್ಕೆ ಬದಲಾಯಿಸುವ ಜಾರ್ಖಂಡ್ ಜಿಲ್ಲೆಯ ಪ್ರಯತ್ನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಮಾತನಾಡಿದ್ದಾರೆ.
ದುಮ್ಕಾದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ ರವಿವಾರ ರಜೆ ಎಂಬ ಪದ್ದತಿಯನ್ನು ತಂದಿದ್ದು ಕ್ರಿಶ್ಚಿಯನ್ನರು. ನಮ್ಮ ದೇಶದಲ್ಲಿ ಭಾನುವಾರ ರಜೆ ಇದೆ. ಬ್ರಿಟಿಷರು ಇಲ್ಲಿ ಆಳ್ವಿಕೆ ನಡೆಸುತ್ತಿದ್ದಾಗ, ಕ್ರಿಶ್ಚಿಯನ್ ಸಮುದಾಯವು ರಜಾದಿನವನ್ನು (ಭಾನುವಾರ) ಆಚರಿಸುತ್ತಿತ್ತು, ಈ ಸಂಪ್ರದಾಯವು ಆ ಸಮಯದಿಂದ ಪ್ರಾರಂಭವಾಯಿತು. ಭಾನುವಾರಕ್ಕೂ ಹಿಂದೂಗಳಿಗೆ ಸಂಬಂಧ ಹೊಂದಿಲ್ಲ ಎಂದರು.
ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳು ವೋಟ್ ಬ್ಯಾಂಕ್ ರಾಜಕೀಯವನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಜಾರ್ಖಂಡ್ ನಲ್ಲಿ ನುಸುಳುಕೋರರು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದ್ದಾರೆ ಎಂದು ಹೇಳಿದರು.
ಇದು ಕಳೆದ 200-300 ವರ್ಷಗಳಿಂದ ನಡೆಯುತ್ತಿದೆ. ಈಗ, ಅವರು ಒಂದು ಜಿಲ್ಲೆಯಲ್ಲಿ ಭಾನುವಾರದ ರಜಾದಿನಕ್ಕೆ ಬೀಗ ಹಾಕಿದ್ದಾರೆ ಮತ್ತು ಶುಕ್ರವಾರ ರಜೆ ಇರುತ್ತದೆ ಎಂದು ಹೇಳಿದ್ದಾರೆ. ಇಲ್ಲಿಯವರೆಗೆ ಹಿಂದೂಗಳ ಜೊತೆ ಮಾತ್ರ ಗಲಾಟೆ ಇತ್ತು ಈಗ ಕ್ರಿಶ್ಚಿಯನ್ನರ ವಿರುದ್ಧವೂ ಗಲಾಟೆ ಆರಂಭಿಸಿದ್ದಾರೆ ಎಂದು ಪ್ರಧಾನಿ ಮೋದಿ ಮಂಗಳವಾರ ಹೇಳಿದ್ದಾರೆ.