ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ಗೆ ರಿಲೀಫ್ ಸಿಕ್ಕಿದೆ. ರೌಸ್ ಅವೆನ್ಯೂ ಕೋರ್ಟ್, ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರಿಗೆ ಬಿಗ್ ರಿಲೀಫ್ ನೀಡಿದೆ.
ನ್ಯಾಯಾಲಯ ಈ ಪ್ರಕರಣದಲ್ಲಿ ಶಶಿ ತರೂರ್ ಅವರನ್ನು ಖುಲಾಸೆಗೊಳಿಸಿದೆ. ಪತ್ನಿ ಸುನಂದಾ ಪುಷ್ಕರ್ ಸಾವಿಗೆ ಶಶಿ ತರೂರ್ ಕಾರಣ ಎಂಬುದನ್ನು ಕೋರ್ಟ್ ಅಲ್ಲಗಳೆದಿದೆ. ಸುನಂದಾ ಪುಷ್ಕರ್ ತರೂರ್ ಅವರ ಪತ್ನಿ. ಜನವರಿ 17, 2014 ರಂದು ಸುನಂದಾ ಪುಷ್ಕರ್ ದೆಹಲಿಯ ಪಂಚತಾರಾ ಹೋಟೆಲ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಸಾವಿಗೆ ಕೆಲವು ದಿನಗಳ ಮೊದಲು, ಸುನಂದಾ ಪುಷ್ಕರ್, ತರೂರ್ ಪಾಕಿಸ್ತಾನಿ ಮಹಿಳಾ ಪತ್ರಕರ್ತೆಯೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಆರೋಪಿಸಿದ್ದರು.
ಸುನಂದಾ ಸಾವಿನ ಪ್ರಕರಣದಲ್ಲಿ, ದೆಹಲಿ ಪೊಲೀಸರು ಶಶಿ ತರೂರ್ ಅವರನ್ನು ಆರೋಪಿಯನ್ನಾಗಿ ಮಾಡಿದ್ದರು. ಅವರ ವಿರುದ್ಧ ಐಪಿಸಿ ಸೆಕ್ಷನ್ 307, 498 ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಏಳು ವರ್ಷಗಳ ನಂತರ, ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಎಲ್ಲಾ ಆರೋಪಗಳಿಂದ ತರೂರ್ ಅವರನ್ನು ಖುಲಾಸೆಗೊಳಿಸಿದೆ.
ನ್ಯಾಯಾಲಯದಲ್ಲಿ ರಿಲೀಫ್ ಸಿಗ್ತಿದ್ದಂತೆ, ಏಳೂವರೆ ವರ್ಷ ಚಿತ್ರಹಿಂಸೆ ಅನುಭವಿಸಿದ್ದೇ ಎಂದು ತರೂರ್ ಹೇಳಿದ್ದಾರೆ. ಶಶಿ ತರೂರ್ ಅವರನ್ನು ಒಮ್ಮೆಯೂ ಬಂಧಿಸಿರಲಿಲ್ಲ. ಅವರಿಗೆ ಜಾಮೀನು ಸಿಕ್ಕಿತ್ತು.