ಓವಲ್‍ನ ಕೆನ್ನಿಂಗ್ಟನ್‍ನಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ ಮ್ಯಾನ್ ರೋಹಿತ್ ಶರ್ಮಾ ಅವರು 100 ರನ್ ಬಾರಿಸಿ ದಾಖಲೆ ಮಾಡಿದ್ದಾರೆ.
ಎಂಟು ವರ್ಷಗಳ ಬಳಿಕ ಅವರು ವಿದೇಶದ ಪಿಚ್‍ನಲ್ಲಿ ಸೆಂಚುರಿ ಹೊಡೆದಿದ್ದಾರೆ. ಇಂಗ್ಲೆಂಡ್‍ನಲ್ಲಿ ಸಿಕ್ಸರ್ ಬಾರಿಸುವ ಮೂಲಕ 100 ರನ್‍ಗಳ ಗಡಿ ದಾಟಿದ್ದು ಅವರ ವೃತ್ತಿಜೀವನದ ವಿಶೇಷತೆಗಳಲ್ಲಿ ಒಂದಾಗಿದೆ.
ಈ ಮೂಲಕ ಟೆಸ್ಟ್ ಮ್ಯಾಚಿನ ಮೂರನೇ ದಿನ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಮುಖದಲ್ಲಿ ನಗು ಹೆಚ್ಚಿದೆ.
ಮೊದಲ ಇನ್ನಿಂಗ್ಸ್ ನಲ್ಲಿ ರೋಹಿತ್ ಕೇವಲ 11 ರನ್‍ಗಳನ್ನು ಮಾತ್ರವೇ ಹೊಡೆದಿದ್ದರು.
2018ರ ಜು.18ರಂದು ಇಂಗ್ಲೆಂಡ್ ಪ್ರವಾಸಕ್ಕೆ ರೋಹಿತ್ ಅವರಿಗೆ ಸ್ಥಾನ ಸಿಕ್ಕಿರಲಿಲ್ಲ. ಆದರೆ ನಿರಾಶರಾಗದ ಹಿಟ್‍ಮ್ಯಾನ್ ಆಶಾಭಾವದಿಂದ ‘ ಸನ್ ವಿಲ್ ರೈಸ್ ಅಗೇನ್ ಟುಮಾರೊ’ ಎಂದು ಟ್ವೀಟ್ ಮಾಡಿ ಅಭಿಮಾನಿಗಳ ಮನಗೆದ್ದಿದ್ದರು. 2014ರಲ್ಲಿ ಅವರು ಇಂಗ್ಲೆಂಡ್ ಪ್ರವಾಸಕ್ಕೆ ತಂಡದ ಜತೆಯಲ್ಲಿದ್ದರು.
BIG NEWS: ನೈಜೀರಿಯನ್ ಡ್ರಗ್ ಪೆಡ್ಲರ್ ಅರೆಸ್ಟ್; 1 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತು ವಶಕ್ಕೆ
ಈ ಹಳೆಯ ಟ್ವೀಟ್, ರೋಹಿತ್ ಅವರ ಸೆಂಚುರಿಯೊಂದಿಗೆ ಮುನ್ನೆಲೆಗೆ ಬಂದಿದೆ. ನಾಲ್ಕು ವರ್ಷಗಳ ನಂತರ ಈ ಟ್ವೀಟ್ ಪುನಃ ವೈರಲ್ ಆಗುತ್ತಿದೆ. ತನ್ನ ಕಟು ಟೀಕಾಕಾರರಿಗೆ ರೋಹಿತ್ ಅವರು ಸೆಂಚುರಿ ಬಾರಿಸುವ ಮೂಲಕ ಕಪಾಳಮೋಕ್ಷ ಮಾಡಿದ್ದಾರೆ ಎಂದು ಅಭಿಮಾನಿಗಳು ಟ್ವಿಟರ್‍ನಲ್ಲಿ ಸಂಭ್ರಮಿಸುತ್ತಿದ್ದಾರೆ. ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ ಹಾಗೂ ಭಾರತ ತಂಡಗಳು 1-1 ಸಮಬಲ ಸಾಧಿಸಿವೆ.