ಬೆಂಗಳೂರು: ಈ ವರ್ಷ ಬಿಸಿಲು ಪ್ರಖರತೆ ಹೆಚ್ಚಾಗಲಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಬಿಸಿಲ ಬೇಗೆ ಹೆಚ್ಚಾಗುತ್ತಿದ್ದು, ಅನೇಕ ಜಿಲ್ಲೆಗಳಲ್ಲಿ ತಾಪಮಾನ ಏರಿಕೆಯಾಗಿದೆ.
ನವೆಂಬರ್ ನಲ್ಲಿ ಜಾಸ್ತಿ ಮಳೆಯಾಗಿದ್ದ ಕಾರಣ ಚಳಿಗಾಲದ ಅವಧಿ ಇಳಿಮುಖವಾಗಿ ವಾಡಿಕೆಗಿಂತ ಮೊದಲೇ ಬಿಸಿಲ ಬೇಗೆ ಜಾಸ್ತಿಯಾಗಿದೆ. ಈ ವರ್ಷ 4 ತಿಂಗಳು ಬಿಸಿಲ ಪ್ರಖರತೆ ಇರಲಿದೆ. ಮಾರ್ಚ್ 1 ರಿಂದ ಮೇ 31 ರ ವರೆಗೆ ಬೇಸಿಗೆಯ ಅವಧಿ ಇರುತ್ತಿತ್ತು. ಈ ವರ್ಷ ಫೆಬ್ರವರಿ ಎರಡನೇ ವಾರದಿಂದಲೇ ಬಿಸಿಲ ಪ್ರಖರತೆ ಹೆಚ್ಚಾಗತೊಡಗಿದೆ.
ಸಾಮಾನ್ಯವಾಗಿ ಏಪ್ರಿಲ್ ನಲ್ಲಿ ಉಷ್ಣಾಂಶ ಹೆಚ್ಚಳವಾಗುತ್ತಿತ್ತು. ಈ ಬಾರಿ ಫೆಬ್ರವರಿಯಿಂದಲೇ ಬಿಸಲು ಜಾಸ್ತಿಯಾಗಿದ್ದು, ಮಾರ್ಚ್ ನಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಾಗುವ ಸಾಧ್ಯತೆ ಇದೆ. ಇನ್ನು ಮಾರ್ಚ್ ಮೂರನೇ ವಾರದಲ್ಲಿ ಮುಂಗಾರು ಪೂರ್ವ ಮಳೆಯಾಗಲಿದೆ. ಬೆಂಗಳೂರಿನಲ್ಲಿ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ತಲುಪಬಹುದು. ಅದೇ ರೀತಿ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ 40 ಡಿಗ್ರಿ ಸೆಲ್ಸಿಯಸ್ ನಷ್ಟು ತಾಪಮಾನ ದಾಖಲಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.