
ಬೆಂಗಳೂರು: ರಾಜ್ಯದಲ್ಲಿ ಒಂದೆಡೆ ಬಿಸಿಲ ಝಳ ಹೆಚ್ಚುತ್ತಿದ್ದರೆ ಇನ್ನೊಂದೆಡೆ ಬಿಸಿಗಾಳಿ ಎಚ್ಚರಿಕೆ ನೀಡಲಾಗಿದೆ. ಮತ್ತೊಂದೆ ಮಕ್ಕಳಲ್ಲಿ ಅನಾರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ.
ಬಿರುಬಿಸಿಲಿನಿಂದಾಗಿ ಪುಟ್ಟ ಮಕ್ಕಳು ಹೈರಾಣಾಗುತ್ತಿದ್ದು, ಹಲವಾರು ಇನ್ಫೆಕ್ಷನ್ ನಿಂದ ಮಕ್ಕಳು ಬಳಲುತ್ತಿದ್ದಾರೆ. ಅದರಲ್ಲಿಯೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಗರಿಷ್ಠ ತಾಪಮಾನ ದಾಖಲಾಗಿದೆ. ಇದರಿಂದಾಗಿ ದೊಡ್ದವರೇ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಇನ್ನು ಚಿಕ್ಕಮಕ್ಕಳಂತು ಪರದಾಡುವಂತಾಗಿದೆ.
ಮಕ್ಕಳಲ್ಲಿ ಕ್ಯಾಂಡಿಡಾ ಇನ್ಫೆಕ್ಷನ್, ಫಂಗಲ್ ಇನ್ ಫೆಕ್ಷನ್, ವೈರಲ್ ಇನ್ ಫೆಕ್ಷನ್, ಡೈಯೆರಿಯಾ, ಸ್ಕಿನ್ ಅಲರ್ಜಿ, ಮೈಮೇಲೆ ರ್ಯಾಶಸ್ ನಂತಹ ಸಮಸ್ಯೆಗಳು ಹೆಚ್ಚುತ್ತಿವೆ. ಮಕ್ಕಳಲ್ಲಿ ಕಂಡುಬರುವ ಅನಾರೋಗ್ಯ ಒಬ್ಬರಿಂದ ಒಬ್ಬರಿಗೆ ಬೇಗನೆ ಹರಡುತ್ತವೆ. ಈ ನಿಟ್ಟಿನಲ್ಲಿ ಪೋಷಕರು ಹೆಚ್ಚು ಮಕ್ಕಳ ಮೇಲೆ ನಿಗಾ ವಹಿಸಬೇಕು.
ಮಕ್ಕಳು ಬೇಸಿಗೆ ಮುಗಿಯುವವರೆಗೂ ಕಾದು ಆರಿಸಿದ ನೀರು ಸೇವಿಸುವಂತೆ ನೋಡಿಕೊಳ್ಳಬೇಕು. ಮನೆಯಲ್ಲಿಯೇ ಆಹಾರ ತಯಾರಿಸಿ ನೀಡಿ. ಮಕ್ಕಳಲ್ಲಿ ನಿತ್ರಾಣ, ನಿರ್ಜಲೀಕರಣ, ಅಜೀರ್ಣ, ಸನ್ ಸ್ಟ್ರೋಕ್ ನಂತಹ ಸಮಸ್ಯೆಗಳು ಆಗದಂತೆ ನೋಡಿಕೊಳ್ಳಿ. ಇಂತಹ ಸಮಸ್ಯೆ ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೇ ವೈದರನ್ನು ಸಂಪರ್ಕಿಸಿ. ತಾಪಮಾನ ಕಡಿಮೆಯಾಗುವವರೆಗೂ ಬಿಸಿಲಿಗೆ ಮಕ್ಕಳು ಮೈಯೊಡ್ಡದಂತೆ ನೋಡಿಕೊಳ್ಳುವುದು ಉತ್ತಮ.