ಸುಮಂಗಲಿಯರು ಅನೇಕ ಸಂಗತಿಗಳ ಬಗ್ಗೆ ಗಮನ ನೀಡಬೇಕಾಗುತ್ತದೆ. ಬಳೆ ಧರಿಸುವ ಮೊದಲೂ ಕೆಲವೊಂದು ವಿಷ್ಯಗಳನ್ನು ನೆನಪಿಡಬೇಕು. ಜ್ಯೋತಿಷ್ಯ ಶಾಸ್ತ್ರದಲ್ಲಿ ಸುಮಂಗಲಿ ಮಹಿಳೆಯ ಬಳೆಯನ್ನು ಪತಿಯ ಭಾಗ್ಯಕ್ಕೆ ಹೋಲಿಕೆ ಮಾಡಲಾಗುತ್ತದೆ. ಹಾಗಾಗಿ ಬಳೆ ಧರಿಸುವ ಮೊದಲು ಮಹಿಳೆಯರು ಅದ್ರ ವಿಶೇಷತೆ ತಿಳಿದಿರಬೇಕು.
ಸಾಮಾನ್ಯವಾಗಿ ಮಣ್ಣಿನ ಬಳೆ ಧರಿಸುವ ವೇಳೆ ಕೆಲ ಬಳೆಗಳು ಒಡೆಯುತ್ತವೆ. ಒಡೆದ ಬಳೆಯನ್ನು ಕೆಲವರು ತೆಗೆಯುವುದಿಲ್ಲ. ನೆಲಕ್ಕೆ ಬಿದ್ದ ಬಳೆ ಚೂರು ಕಾಲಿಗೆ ತಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಡೆದ ಬಳೆಯನ್ನು ಹಾಗೆ ಬಿಡುವುದು ಒಳ್ಳೆಯದಲ್ಲ. ಬಳೆ ಚೂರನ್ನು ತೆಗೆದುಕೊಂಡು ಮೂರು ಬಾರಿ ಹಣೆಗೆ ತಾಗಿಸಿ, ಕಾಗದದಲ್ಲಿ ಅದನ್ನು ಕಟ್ಟಿ, ಮರದ ಕೆಳಗೆ ಹಾಕಿ ಬರಬೇಕು.
ಕೆಲವೊಮ್ಮೆ ಧರಿಸುವ ವೇಳೆ ಬಳೆ ಹಾಳಾಗುತ್ತದೆ. ಆದ್ರೂ ಮಹಿಳೆಯರು ಆ ಬಳೆಯನ್ನು ಧರಿಸುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಂತ ಬಳೆಯನ್ನು ಧರಿಸಬಾರದು. ಇದು ಪತಿ ಯಶಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಪತಿಯ ದೌರ್ಭಾಗ್ಯ ಶುರುವಾಗುತ್ತದೆ.
ಬಲಗೈಗೆ ಧರಿಸಿದ ಬಳೆಗಿಂತ ಒಂದೆರಡು ಬಳೆಯನ್ನು ಎಡಗೈಗೆ ಹೆಚ್ಚಾಗಿ ಧರಿಸಿ. ಇದ್ರಿಂದ ಪತಿ-ಪತ್ನಿ ಮಧ್ಯೆ ನಡೆಯುವ ಜಗಳ ಕಡಿಮೆಯಾಗುತ್ತದೆ.
ಕೂದಲು ಬಿಚ್ಚಿಕೊಂಡು ಬಳೆ ಧರಿಸಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಹೀಗೆ ಮಾಡಿದ್ರೆ ಪತಿ ಹಾಗೂ ಸಹೋದರನ ಸಾಲ ಹೆಚ್ಚಾಗುತ್ತದೆಯಂತೆ.