ಬೆಂಗಳೂರು : ನಟ ದರ್ಶನ್ ಅವರು ಸುಮಲತಾ ಸೇರಿ 6 ಮಂದಿ ಆಪ್ತರನ್ನು ಇನ್ ಸ್ಟಾದಲ್ಲಿ ಅನ್ ಫಾಲೋ ಮಾಡಿದ ಬೆನ್ನಲ್ಲೇ ಸುಮಲತಾ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
ಸುಮಲತಾ ಪೋಸ್ಟ್ ನಲ್ಲೇನಿದೆ..?
ಬೆಸ್ಟ್ ಆ್ಯಕ್ಟಿಂಗ್ ಅವಾರ್ಡ್ ಯಾರಿಗೆ ಹೋಗುತ್ತೆ ಅಂದರೆ ಯಾರು ಸತ್ಯವನ್ನು ತಿರುಚುತ್ತಾರೋ ಅವರಿಗೆ ಹೋಗುತ್ತದೆ. ಆದರೂ ಕೆಲವರು ತಮ್ಮನ್ನು ತಾವು ಹೀರೋ ಎಂದಿಕೊಳ್ಳುವಂತೆ ಮಾಡುವ ಅತ್ಯುತ್ತಮ ನಟನೆಗೆ ಆಸ್ಕರ್ ಪ್ರಶಸ್ತಿ ಕೊಡಬೇಕು ಎಂದು ಹೇಳಿದ್ದಾರೆ. ಯಾರ ಕುರಿತಾಗಿ ಸುಮಲತಾ ಈ ಪೋಸ್ಟ್ ಮಾಡಿದ್ದು ಎಂಬುದು ಸ್ಪಷ್ಟವಾಗಿಲ್ಲ. ಆದರೆ ದರ್ಶನ್ ಅನ್ ಫಾಲೋ ಮಾಡಿದ ಬೆನ್ನಲ್ಲೇ ಸುಮಲತಾ ಪೋಸ್ಟ್ ಹಂಚಿಕೊಂಡಿದ್ದು, ಅಭಿಮಾನಿಗಳನ್ನು ಸುಮಲತಾ ಪೋಸ್ಟ್ ನ್ನು ಶೇರ್ ಮಾಡಿದ್ದಾರೆ.

ದರ್ಶನ್ ಇನ್ ಸ್ಟಾಗ್ರಾಂ ಖಾತೆಯಲ್ಲಿ ಸುಮಲತಾ ಸೇರಿ 6 ಜನರನ್ನ ಅನ್ ಫಾಲೋ ಮಾಡಿದ್ದಾರೆ. ಸುಮಲತಾ, ಅಭಿಷೇಕ್ ಅಂಬರೀಷ್, ಪತ್ನಿ ಅವಿವಾ, ದಿನಕರ್ ತೂಗುದೀಪ್ , ಪುತ್ರ ವಿನೀಶ್ ನನ್ನು ಅನ್ ಫಾಲೋ ಮಾಡಿ ಚರ್ಚೆಗೆ ಕಾರಣವಾಗಿದ್ದಾರೆ.