ಸುಕ್ಮಾ: ಛತ್ತೀಸ್ ಗಢದ ಬಿಜಾಪುರದಲ್ಲಿ ನಡೆದ ಸ್ಫೋಟದಲ್ಲಿ 8 ಜನ ಪೊಲೀಸ್ ಸಿಬ್ಬಂದಿ ಹಾಗೂ ಚಾಲಕ ಸಾವನ್ನಪ್ಪಿದ ಘಟನೆ ಬೆನ್ನಲ್ಲೇ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಹುದುಗಿಸಿಟ್ಟಿದ್ದ ಐಇಡಿ ಸ್ಫೋಟಕ ಪತ್ತೆಯಾಗಿದೆ.
ಸಿಆರ್ ಪಿ ಎಫ್ ಹಾಗೂ ಜಿಲ್ಲಾ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಕೊಂಟಾ-ಗೋಲಪಲ್ಲಿ ರಸ್ತೆಯ ಬೆಲ್ಪೊಚ್ಚ ಗ್ರಾಮದ ಬಳಿ ರಸ್ತೆಯಲ್ಲಿ ಹುಡುಗಿಸಿಟ್ಟಿದ್ದ 10 ಕೆಜಿ ಐಇಡಿ ಪತ್ತೆ ಮಾಡಿದ್ದು, ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದಾರೆ.
ಬಿಜಾಪುರ ಜಿಲ್ಲೆಯ ಕುಟ್ರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಂಬೇಲಿ ಗ್ರಾಮದ ಬಳಿ ನಕ್ಸಲರು ಸೋಮವಾರ 60-70 ಕೆಜಿ ಇಇಡಿ ಬಳಸಿ ಭದ್ರತಾ ಸಿಬ್ಬಂದಿ ವಹನ ಸ್ಫೋಟಿಸಿದ್ದರು. ಈ ಸ್ಫೋಟದಲ್ಲಿ ಎಂಟು ಜನ ಭದ್ರತಾ ಸಿಬ್ಬಂದಿ, ವಾಹನ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಘಟನೆ ಬೆನ್ನಲ್ಲೇ ಇದೀಗ ಸುಕ್ಮಾ ಬಳಿ ರಸ್ತೆಯಲ್ಲಿ ಅಡಗಿಸಿಟ್ಟಿದ್ದ ಐಇಡಿ ಸ್ಫೋಟಕಳು ಪತ್ತೆಯಾಗಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.