ವಿಜಯಪುರ: ಇಬ್ಬರು ಹೆಣ್ಣು ಮಕ್ಕಳ ಜೊತೆ ಕಾಲುವೆಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದ ಬಳಿ ಘಟನೆ ನಡೆದಿದೆ.
ಮುಳವಾಡ ಏತ ನೀರಾವರಿ ಕಾಲುವೆಗೆ ಹಾರಿ ರೇಣುಕಾ(26) ಹಾಗೂ ಯಲ್ಲವ್ವ(2), ಅಮೃತಾ(1) ಮೃತಪಟ್ಟವರು. ಎರಡು ದಿನದ ಹಿಂದೆ ಗಂಡನ ಮನೆಯಲ್ಲಿ ರೇಣುಕಾ ಜಗಳ ಮಾಡಿಕೊಂಡು ಬಂದಿದ್ದರು. ಗಂಡನ ಮನೆಯವರು ರೇಣುಕಾ ಮತ್ತು ಮಕ್ಕಳಿಗಾಗಿ ಹುಡುಕಾಟ ನಡೆಸಿದ್ದರು. ಮನಗೂಳಿ ಪೊಲೀಸ್ ಠಾಣೆಗೆ ನಿನ್ನೆ ಗಂಡನ ಮನೆಯವರು ದೂರು ನೀಡಿದ್ದರು.
ಮುಳವಾಡ ಏತ ನೀರಾವರಿ ಕಾಲುವೆಯಲ್ಲಿ ರೇಣುಕಾ ಮತ್ತು ಮಕ್ಕಳ ಶವ ಪತ್ತೆಯಾಗಿವೆ. ಮನಗೂಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.