
ಹುಣಸೂರು: ಮಹಿಳೆಯೊಂದಿಗಿರುವ ಫೋಟೋವನ್ನು ವಾಟ್ಸಪ್ ಸ್ಟೇಟಸ್ ಹಾಕಿಕೊಂಡು ಎಡವಟ್ಟು ಮಾಡಿಕೊಂಡ ಪ್ರಿಯಕರ ಹಾಗೂ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹುಣಸೂರಿನ ಕಲ್ಕುಣಿಕೆಯಲ್ಲಿ ಘಟನೆ ನಡೆದಿದೆ. ಹತ್ತಿಮರದ ಬೀದಿ ನಿವಾಸಿ 28 ವರ್ಷದ ಮಹಿಳೆ, ಅದೇ ಬಡಾವಣೆಯ 20 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಹಿಳೆ ಜೊತೆ ಸಲುಗೆ ಬೆಳೆಸಿಕೊಂಡಿದ್ದ ಯುವಕ ಆಕೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ.
ಆಕೆಯ ಜೊತೆಗಿರುವ ಫೋಟೋವನ್ನು ಸ್ಟೇಟಸ್ ನಲ್ಲಿ ಅಪ್ಲೋಡ್ ಮಾಡಿದ್ದು, ಅದು ವೈರಲ್ ಆಗಿದೆ. ಇದರಿಂದಾಗಿ ಮಹಿಳೆ ಮನೆಯಲ್ಲಿ ಗಲಾಟೆ ನಡೆದಿದ್ದು, ಆತಂಕಗೊಂಡ ಮಹಿಳೆ ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಎರಡು ಮನೆಯವರ ನಡುವೆ ಗಲಾಟೆಗೆ ಕಾರಣವಾಗಿದೆ. ಪತ್ನಿ ಆತ್ಮಹತ್ಯೆಗೆ ಯುವಕನೇ ಕಾರಣವೆಂದು ಆಕೆಯ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಿಯತಮೆ ಸಾವು ಮತ್ತು ಎರಡು ಕುಟುಂಬದವರ ಗಲಾಟೆಗೆ ಹೆದರಿದ ಯುವಕ ಕೆಆರ್ ನಗರ ರೈಲ್ವೆ ನಿಲ್ದಾಣದ ಬಳಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.