ತುಮಕೂರು: ಸಾಲಗಾರರ ಕಿರುಕುಳಕ್ಕೆ ನೊಂದ ಮಹಿಳೆ ವಿಡಿಯೋ ಮಾಡಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿದ್ದಾರೆ. ಸಾದಿಕ್ ಬೇಗಂ(42) ಆತ್ಮಹತ್ಯೆ ಮಾಡಿಕೊಂಡವರು.
ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಕಲ್ಲುಶೆಟ್ಟಿಹಳ್ಳಿ ಸಮೀಪದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಿಪಟೂರಿನ ಗಾಂಧಿನಗರದ ಭೋವಿ ಕಾಲೋನಿ ನಿವಾಸಿಯಾಗಿರುವ ಸಾದಿಕ್ ಬೇಗಂ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಮತ್ತು ಸಾಲಗಾರರ ಕಾಟದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದದರು ಎನ್ನಲಾಗಿದೆ. ಕಿಬ್ಬನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.