
ಹಾವೇರಿ: ಸಾಲ ಬಾಧೆ ತಾಳಲಾರದೆ ರೈತರೊಬ್ಬರು ಬೆಂಕಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಾವೇರಿ ತಾಲೂಕಿನ ಕರಜಗಿ ಗ್ರಾಮದ ಬಳಿ ಬುಧವಾರ ಘಟನೆ ನಡೆದಿದೆ.
ನೀಲಗಿರಿ ತೋಪಿನಲ್ಲಿ ಬೆಂಕಿಗೆ ಹಾರಿ ಕರಜಗಿ ಗ್ರಾಮದ ಪರಮಣ್ಣ ವೀರಪ್ಪ ಡೊಂಕಣ್ಣನವರ(65) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳೆ ಸಾಲ ಹಾಗೂ ಎರಡು ಟ್ರಾಕ್ಟರ್ ಖರೀದಿಗೆ 12 ಲಕ್ಷ ರೂಪಾಯಿ ಸಾಲ ತೀರಿಸುವ ಚಿಂತೆಗೆ ಒಳಗಾಗಿದ್ದ ಅವರು ಪತ್ನಿಯೊಂದಿಗೆ ಚರ್ಚೆ ನಡೆಸಿ ಜಮೀನಿಗೆ ಹೋಗುವುದಾಗಿ ತೆರಳಿದ್ದಾರೆ.
ಮಧ್ಯಾಹ್ನ 2 ಗಂಟೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬದವರು ಹುಡಕುಲು ಹೋಗಿದ್ದಾರೆ. ಜಮೀನಿನ ಪಕ್ಕದ ನೀಲಗಿರಿ ತೋಪಿನಲ್ಲಿ ಬೆಂಕಿ ಇರುವುದನ್ನು ಗಮನಿಸಿದ ಕುಟುಂಬದವರು ಹೋಗಿ ನೋಡಿದಾಗ ಪರಮಣ್ಣ ಬೆಂಕಿಯಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಮೃತರ ಪುತ್ರ ಈರಣ್ಣ ದೂರು ನೀಡಿದ್ದಾರೆ.