alex Certify ತಂದೆ, ತಾಯಿ ನೋಡಿಕೊಳ್ಳದೇ ಪತ್ನಿ ಕಿರುಕುಳ: ತಾಯಿಯೊಂದಿಗೆ ಮಗ ಆತ್ಮಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂದೆ, ತಾಯಿ ನೋಡಿಕೊಳ್ಳದೇ ಪತ್ನಿ ಕಿರುಕುಳ: ತಾಯಿಯೊಂದಿಗೆ ಮಗ ಆತ್ಮಹತ್ಯೆ

ಬೆಂಗಳೂರು: ತಂದೆ, ತಾಯಿ ನೋಡಿಕೊಳ್ಳುವ ವಿಚಾರಕ್ಕೆ ಪತ್ನಿ ಒಪ್ಪದೇ ಕಾಟ ಕೊಟ್ಟಿದ್ದರಿಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ತಾಯಿಯು ಸೊಸೆಯ ಕಿರುಕುಳ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಬ್ಬರು ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲೇ ರೋಗಿ ತಂದೆ ಅಸಹಾಯಕರಾಗಿ ಮಲಗಿದ್ದರು.

ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಡಿಕೇರಿ ಮೂಲದ ಶ್ರೀನಿವಾಸ್ ಹಾಗೂ ಅವರ ತಾಯಿ ಆತ್ಮಹತ್ಯೆ ಮಾಡಿಕೊಂಡವರು. ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡುತ್ತಿದ್ದ ಶ್ರೀನಿವಾಸ್ ಕಷ್ಟಪಟ್ಟು ದುಡಿದು ಸ್ವಂತ ಮನೆ ಕಟ್ಟಿಕೊಂಡಿದ್ದರು. ಪತ್ನಿ ಹಾಗೂ ಆರು ವರ್ಷದ ಮಗನೊಂದಿಗೆ ವಾಸವಾಗಿದ್ದರು.

ಮಡಿಕೇರಿಯಲ್ಲಿ ವಯಸ್ಸಾದ ತಂದೆ, ತಾಯಿಯನ್ನು ನೋಡಿಕೊಳ್ಳಲು ಯಾರು ಇಲ್ಲದ ಕಾರಣ ಮನೆಗೆ ಕರೆದುಕೊಂಡು ಬಂದಿದ್ದರು. ಅನಾರೋಗ್ಯದಿಂದ ತಂದೆ ಹಾಸಿಗೆ ಹಿಡಿದಿದ್ದು, ಶ್ರೀನಿವಾಸ್ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಅವರ ತಂದೆ, ತಾಯಿಯನ್ನು ನೋಡಿಕೊಳ್ಳುವ ವಿಚಾರಕ್ಕೆ ಪತ್ನಿ ಜಗಳವಾಡುತ್ತಿದ್ದಳು. ಆಕೆಯ ಕಾಟ ಸಹಿಸಿಕೊಳ್ಳದೆ ಶ್ರೀನಿವಾಸ್ ತಾಯಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ತಾಯಿಯನ್ನು ಇಂತಹ ಸ್ಥಿತಿಯಲ್ಲಿ ಕಂಡ ಶ್ರೀನಿವಾಸ್ ಕೂಡ ಅದೇ ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದಾರೆ. ಹಾಸಿಗೆ ಹಿಡಿದಿದ್ದ ಅವರ ತಂದೆ ಅಲ್ಲೇ ಮಲಗಿದ್ದರೂ ಏನು ಮಾಡಲಾಗದೇ ಸಹಾಯಕರಾಗಿದ್ದರು. ವಿಷಯ ತಿಳಿದ ರಾಜಗೋಪಾಲನಗರ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಮೃತ ದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...