
ಕಲಬುರಗಿ: ಕಬ್ಬು ತುಂಬಿದ್ದ ಲಾರಿಯೊಂದು ಚಲಕನ ನಿಯಂತ್ರಣ ತಪ್ಪಿ ಭೀಮಾನದಿಗೆ ಉರುಳಿ ಬಿದ್ದಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ನಡೆದಿದೆ.
ಇಟಗಾ-ಗಾಣಾಗಾಪುರ ನಡುವಿನ ಭೀಮಾನದಿ ಸೇತುವೆಯಿಂದ ಲಾರಿ ನದಿಗೆ ಬಿದ್ದಿದ್ದು, ಲಾರಿ ಚಾಲಕ ನಾಪತ್ತೆಯಾಗಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಲಾರಿ ಚಾಲಕನಿಗಾಗಿ ನದಿಯಲ್ಲಿ ಶೋಧ ನಡೆಸಲಾಗುತ್ತಿದೆ.