ಬೆಂಗಳೂರು: ಕಬ್ಬು ಬೆಳೆಗಾರರ ರಕ್ಷಣೆಗೆ ಮಹಾರಾಷ್ಟ್ರ ರೀತಿ ಕಾಯ್ದೆ ಜಾರಿಗೊಳಿಸುವುದಾಗಿ ಸಕ್ಕರೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಬೆಳೆಗಾರರ ಕಬ್ಬು ಮಾರಾಟದ ವೇಳೆ ತೂಕದಲ್ಲಿ ವ್ಯತ್ಯಾಸ, ವಂಚನೆ ಬಗ್ಗೆ ಆಡಳಿತ ಪಕ್ಷ ಸದಸ್ಯರು ಪ್ರಸ್ತಾಪಿಸಿದಾಗ ಸಚಿವರು ಉತ್ತರ ನೀಡಿದ್ದಾರೆ.
ಸಕ್ಕರೆ ಕಾರ್ಖಾನೆಗಳಲ್ಲಿನ ಅವ್ಯವಹಾರ ತಡೆ, ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಮೋಸ ತಡೆಯಲು ಮಹಾರಾಷ್ಟ್ರ ಮಾದರಿಯಲ್ಲಿ ಕಾನೂನು ಜಾರಿಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಸಹಕಾರಿ ಮತ್ತು ಖಾಸಗಿ ಸಕ್ಕರೆ ಕಾರ್ಖಾನೆಗಳ ನಿಯಂತ್ರಣಕ್ಕಾಗಿ ಏಕರೂಪನೀತಿ ರೂಪಿಸಿ ರೈತರಾಗಿ ಆಗುತ್ತಿರುವ ಅನ್ಯಾಯವನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸ್ವಯಂ ಚಾಲಿತ ತೂಕದ ಯಂತ್ರ ಅಳವಡಿಸಲ ಇಲಾಖೆಯಲ್ಲಿ ಹಣದ ಕೊರತೆ ಇರುವ ಕಾರಣ ಪ್ರಸಕ್ತ ವರ್ಷ ಎಲ್ಲಾ ಕಾರ್ಖಾನೆಗಳಿಗೆ ಯಂತ್ರ ಅಳವಡಿಸಲು ಆಗುವುದಿಲ್ಲ. ದೂರು ಬರುವ ಕಾರ್ಖಾನೆಗಳಲ್ಲಿ ಯಂತ್ರ ಅಳವಡಿಸಲಾಗುವುದು ಮಹಾರಾಷ್ಟ್ರ ಮಾದರಿ ಕಾನೂನು ಜಾರಿ ಚಿಂತನೆ ಇದೆ ಎಂದು ತಿಳಿಸಿದ್ದಾರೆ.