
ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ 300 ಟನ್ ಆಕ್ಸಿಜನ್ ಇದೆ ಎಂದು ಆರೋಗ್ಯ ಸಚಿವ ಡಾ.ಕೆ, ಸುಧಾಕರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಿನ್ನೆ 800 ಟನ್ ಆಕ್ಸಿಜನ್ ರವಾನಿಸಿದೆ. ಕೇಂದ್ರದಿಂದ 1.22 ಲಕ್ಷ ವಯಲ್ ರೆಮ್ ಡಿಸಿವರ್ ಬಂದಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಆಕ್ಸಿಜನ್ ಮತ್ತು ಔಷಧ ಕೊರತೆ ಆಗಲ್ಲ. ಸೋಂಕು ತಗುಲಿ ಮನೆಯಲ್ಲಿ ಐಸೋಲೇಷನ್ ಆಗುವವರಿಗೆ ಚಿಕೆತ್ಸೆ ಪಡೆಯಲು ಅಗತ್ಯವಾದ ಕ್ರಮ ಕೈಗೊಳ್ಳಲಾಗುವುದು. ಚಿಕಿತ್ಸೆ ಪಡೆಯುವ ವಿಧಾನದ ಬಗ್ಗೆ ಟೆಲಿ ಕಾಲಿಂಗ್ ವ್ಯವಸ್ಥೆಯನ್ನು ಶೀಘ್ರದಲ್ಲೇ ಅನುಷ್ಠಾನಕ್ಕೆ ತರಲಾಗುವುದು ಎಂದು ಹೇಳಿದ್ದಾರೆ.