ಬೆಂಗಳೂರು: ಕೊರೋನಾ ಲಸಿಕೆ ಎರಡನೇ ದೋಸ್ ಸಿಗದೆ ಆತಂಕದಲ್ಲಿ ಇದ್ದವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಎರಡನೇ ದೋಸ್ ಪಡೆಯಲು ವಿಳಂಬವಾದವರು ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಕೋವಿಶೀಲ್ಡ್ ಲಸಿಕೆ ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ಪಡೆದುಕೊಳ್ಳಲು 12 – 16 ವಾರಗಳ ಅಂತರ ನಿಗದಿಪಡಿಸಲಾಗಿದೆ. ಇದರಿಂದಾಗಿ ಹೆಚ್ಚು ಸಮಯ ಅವಕಾಶವವಿದ್ದು, ಅದರ ಅನುಸಾರ ಎರಡನೇ ಪಡೆದುಕೊಳ್ಳಬಹುದಾಗಿದೆ. ಕೊವ್ಯಾಕ್ಸಿನ್ ಎರಡನೇ ಡೋಸ್ ಲಸಿಕೆ ಪಡೆಯಲು 4 -6 ವಾರ ಅಂತರವಿದೆ. ಎರಡನೇ ಪಡೆಯಲು ವಿಳಂಬವಾದವರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.