ಬೆಂಗಳೂರು: ನಟ ಕಿಚ್ಚ ಸುದೀಪ್ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುದೀಪ್ ತಿಳಿಸಿದ್ದಾರೆ.
‘ಪೈಲ್ವಾನ್’ ಚಿತ್ರದ ಅಭಿನಯಕ್ಕಾಗಿ ನಟ ಸುದೀಪ್ ಅವರಿಗೆ 2019ನೇ ಸಾಲಿನ ‘ಅತ್ಯುತ್ತಮ ನಟ’ ಪ್ರಶಸ್ತಿ ಘೋಷಿಸಲಾಗಿತ್ತು. ಆದರೆ ನಟ ಸುದೀಪ್, ರಾಜ್ಯ ಚಲನ ಚಿತ್ರ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ.
ಪ್ರಶಸ್ತಿ ನಿರಾಕರಿಸಿದ ಬಗ್ಗೆ ನಟ ಸುದೀಪ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಕರ್ನಾಟಕ ಸರ್ಕಾರ, ಜ್ಯೂರಿ ಸದಸ್ಯರಿಗೆ ಧನ್ಯವಾದಗಳು. ಬೆಸ್ಟ್ ಆಕ್ಟರ್ ಆಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಚಿರಋಣಿ. 7 ವರ್ಷಗಳಿಂದ ನಾನು ಪ್ರಶಸ್ತಿ ಸ್ವೀಕರಿಸುವುದನ್ನು ನಿಲ್ಲಿಸಿದ್ದೇನೆ. ನಾನು ಪ್ರಶಸ್ತಿ ತೆಗೆದುಕೊಳ್ಳದಿರಲು ನಾನಾ ಕಾರಣಗಳಿವೆ. ನನಗಿಂತ ಅತ್ಯುತ್ತಮವಾಗಿ ಅಭಿನಯಿಸುವ ನಟ-ನಟಿಯರಿದ್ದಾರೆ. ಅವರಿಗೆ ಈ ರೀತಿ ಪ್ರಶಸ್ತಿಗಳನ್ನು ನೀಡಿ ಪ್ರೋತ್ಸಾಹಿಸಿ. ಹೊಸಬರಿಗೆ ಪ್ರಶಸ್ತಿ ಕೊಟ್ಟಷ್ಟು ನನಗೆ ತೃಪ್ತಿ ಹಾಗೂ ಖುಷಿಯಾಗುತ್ತದೆ ಎಂದು ತಿಳಿಸಿದ್ದಾರೆ.