ಸೌತ್ ಸಿನಿಮಾಗೆ ಬಾಲಿವುಡ್ ನಟರ ಅಸೂಯೆ ಹಿಂದಿನ ಕಾರಣ ಬಿಚ್ಚಿಟ್ಟ ರಾಮ್ ಗೋಪಾಲ್ ವರ್ಮಾ 29-04-2022 7:13AM IST / No Comments / Posted In: Featured News, Live News, Entertainment ಹಿಂದಿ ಭಾಷೆ ಕುರಿತು ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಮತ್ತು ಬಾಲಿವುಡ್ ನಟ ಅಜಯ್ ದೇವಗನ್ ನಡುವೆ ಟ್ವಿಟ್ಟರ್ ನಲ್ಲಿ ವಾದ – ವಿವಾದಗಳು ನಡೆದ ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಹಲವಾರು ದಿಗ್ಗಜರು ಸುದೀಪ್ ಬೆಂಬಲಕ್ಕೆ ನಿಂತಿದ್ದಾರೆ. ಸುದೀಪ್ ಗೆ ಸಂಪೂರ್ಣ ಬೆಂಬಲ ನೀಡಿರುವ ಜನಪ್ರಿಯ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿ, ಮೂಲ ನೆಲದ ಸತ್ಯಾಂಶವನ್ನು ಯಾರೂ ಅಲ್ಲಗಳೆಯುವಂತಿಲ್ಲ. ಉತ್ತರ ಭಾರತದ ನಟ-ನಟಿಯರಿಗೆ ದಕ್ಷಿಣ ಭಾರತದ ನಟ-ನಟಿಯರ ಬಗ್ಗೆ ಭಯ ಮತ್ತು ಅಸೂಯೆ ಕಾಡುತ್ತಿದೆ ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ಕನ್ನಡದಿಂದ ಡಬ್ ಆಗಿರುವ `ಕೆಜಿಎಫ್-2’ ಬಿಡುಗಡೆಯಾದ ಮೊದಲ ದಿನವೇ 50 ಕೋಟಿ ರೂಪಾಯಿಗಳಷ್ಟು ಗಳಿಕೆಯನ್ನು ಮಾಡಿದೆ. ಮುಂದಿನ ದಿನಗಳಲ್ಲಿ ಹಿಂದಿ ಚಿತ್ರಗಳ ಆರಂಭವನ್ನು ನಾವೆಲ್ಲರೂ ನೋಡಲಿದ್ದೇವೆ ಎಂದು ಕಿಚಾಯಿಸಿದ್ದಾರೆ. The base undeniable ground truth @KicchaSudeep sir ,is that the north stars are insecure and jealous of the south stars because a Kannada dubbing film #KGF2 had a 50 crore opening day and we all are going to see the coming opening days of Hindi films — Ram Gopal Varma (@RGVzoomin) April 27, 2022