ಬೆಂಗಳೂರು: ವಿಧಾನಮಂಡಲ ಅಧಿವೇಶನದಲ್ಲಿ ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಕಾವೇರಿದ ಚರ್ಚೆ ನಡೆದಿರುವಾಗಲೇ ರಾಜ್ಯ ಸರ್ಕಾರ ಮತ್ತೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ನಾಲ್ವರು ಐಪಿಎಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸಿದ್ದರಾಮಪ್ಪ ಅವರನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಿದೆ.
ವರ್ತಿಕಾ ಕಟಿಯಾರ್- ಎಸ್ ಪಿ ಆಂತರಿಕಾ ಭದ್ರತಾ ವಿಭಾಗ
ಸಿರಿಗೌರಿ – ಡಿಸಿಪಿ – ಆಡಳಿತ ವಿಭಾಗ
ಅನೂಪ್ ಶೆಟ್ಟಿ – ಪೊಲೀಸ್ ವರಿಷ್ಠಾಧಿಕಾರಿ -ಸಿಐಡಿ ಗೆ ವರ್ಗಾವಣೆ ಮಾಡಲಾಗಿದೆ.