
ಇದೀಗ ಇಸ್ರೋ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಉಡಾವಣೆಗೆ ಸಿದ್ಧಗೊಂಡಿದೆ. ಇದಕ್ಕೆ ಶುಭಕೋರಿ ಚಂದ್ರಯಾನ-3 ರ 22 ಅಡಿ ಉದ್ದದ ಬೃಹತ್ ಮರಳಿನ ಶಿಲ್ಪವನ್ನು ರಚಿಸಿದ್ದಾರೆ. ಇದನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಪಟ್ನಾಯಕ್, ಚಂದ್ರಯಾನ-3 ಯಶಸ್ಸಿಗಾಗಿ ಇಸ್ರೋ ವಿಜ್ಞಾನಿಗಳ ತಂಡಕ್ಕೆ ಶುಭವಾಗಲಿ ಎಂದು ಬರೆದಿದ್ದಾರೆ.
ಸುದರ್ಶನ್ ಪಟ್ನಾಯಕ್ ಅವರ ಈ ಪೋಸ್ಟ್ ಹಲವಾರು ಮೆಚ್ಚುಗೆಯ ಕಾಮೆಂಟ್‌ಗಳನ್ನು ಗಳಿಸಿದೆ. ಚಂದ್ರಯಾನ-3 ಯಶಸ್ಸಿಗೆ ಜನರು ಶುಭ ಹಾರೈಸಿದ್ದಾರೆ.
ಅಂದಹಾಗೆ, ಇಸ್ರೋ ಶುಕ್ರವಾರ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಬಾಹ್ಯಾಕಾಶ ನಿಲ್ದಾಣದಿಂದ ಚಂದ್ರಯಾನ-3 ಮಿಷನ್ ಅನ್ನು ಪ್ರಾರಂಭಿಸಲಿದೆ. ಹೀಗಾಗಿ ದೇಶಾದ್ಯಂದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಇಸ್ರೋದ ಹಿಂದಿನ ಯೋಜನೆಯಾದ ಚಂದ್ರಯಾನ-2 ಅನ್ನು ಸೆಪ್ಟೆಂಬರ್ 2019 ರಲ್ಲಿ ಉಡಾಯಿಸಿಲಾಗಿತ್ತು. ಆದರೆ, ಸಂವಹನ ದೋಷಗಳಿಂದ ಈ ಉಡಾವಣೆ ಯಶಸ್ವಿಯಾಗಿರಲಿಲ್ಲ.