ಕನ್ನಡಕ ಹಾಕಿಕೊಳ್ಳುವ ಮಹಿಳೆಯರು ಮೇಕಪ್ ಮಾಡಿಕೊಳ್ಳುವಾಗ ಕೆಲವು ವಿಷಯಗಳ ಬಗ್ಗೆ ಜಾಗ್ರತೆ ವಹಿಸಬೇಕು. ನಿಮ್ಮ ಕಣ್ಣನ್ನು ಕನ್ನಡಕ ಮುಚ್ಚುವುದರಿಂದ ಈ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು.
ನಿಮ್ಮ ಹುಬ್ಬುಗಳಿಗೆ ಮೇಕಪ್ ಮಾಡುವುದನ್ನು ಮರೆಯದಿರಿ. ಕನ್ನಡಕ ಹಾಕುವಾಗ ಹುಬ್ಬು ಆಕರ್ಷಕವಾಗಿ ಕಾಣುವಂತಿರಲಿ. ಇದಕ್ಕೆ ಐ ಬ್ರೋಜೆಲ್ ಅಥವಾ ಪೆನ್ಸಿಲ್ ಹಾಕಿ ಹುಬ್ಬನ್ನು ಮೇಲೆ ಎತ್ತುವಂತೆ ಮಾಡಿ.
ಐಲೈನರ್ ಗೂ ವಿವಿಧ ಬಣ್ಣಗಳನ್ನು ಬಳಸಿ. ಇದರಿಂದ ಕನ್ನಡಕ ಧರಿಸಿದರೂ ನಿಮ್ಮ ಕಣ್ಣು ಆಕರ್ಷಕವಾಗಿ ಕಾಣುತ್ತದೆ. ಮೆಟಾಲಿಕ್ ಐ ಶ್ಯಾಡೊಗಳು ಕಣ್ಣುಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ.
ಕನ್ನಡಕ ಒತ್ತಿ ಮೂಗಿನ ಭಾಗದಲ್ಲಿ ಕಲೆಗಳಾಗಿದ್ದರೆ ಅದರ ನಿವಾರಣೆಗೆ ನಿತ್ಯ ಗಂಧ ಅಥವಾ ಅರಶಿನ ತೇದು ಹಚ್ಚಿ. ಅಗತ್ಯವಿರದಿದ್ದಾಗೆಲ್ಲ ಕಣ್ಣಿನಿಂದ ಕನ್ನಡಕ ಕೆಳಗಿಳಿಸಿ. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ ಮಾತ್ರ ಕನ್ನಡಕ ಧರಿಸಿ. ವಿನಾಕಾರಣ ಇಡೀ ದಿನ ಧರಿಸುವುದು ಒಳ್ಳೆಯದಲ್ಲ.