alex Certify ನಿರಂತರವಾಗಿ ಕಾಡುವ ಸೋಮಾರಿತನದ ಹಿಂದಿರಬಹುದು ಇಂಥಾ ಗಂಭೀರ ಕಾರಣ..…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರಂತರವಾಗಿ ಕಾಡುವ ಸೋಮಾರಿತನದ ಹಿಂದಿರಬಹುದು ಇಂಥಾ ಗಂಭೀರ ಕಾರಣ..…!

ಆಲಸ್ಯ ನಮ್ಮ ಶತ್ರುವಿದ್ದಂತೆ. ಕೆಲವೊಮ್ಮೆ ದಿನವಿಡೀ ಮನಸ್ಸು ಮತ್ತು ದೇಹ ಎರಡೂ ಜಡವಾಗಿರುತ್ತದೆ. ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಮನಸ್ಸೇ ಬರುವುದಿಲ್ಲ. ಇಡೀ ದಿನ ವಿಶ್ರಾಂತಿ ತೆಗೆದುಕೊಳ್ಳಬೇಕೆನಿಸುತ್ತದೆ. ಇವೆಲ್ಲ ಸಾಂದರ್ಭಿಕವಾಗಿದ್ದರೆ ಅದರಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ ನಿರಂತರವಾಗಿ ಆಲಸ್ಯ ಮತ್ತು ಸೋಮಾರಿತನವನ್ನು ಅನುಭವಿಸುತ್ತಿದ್ದರೆ ಅದಕ್ಕೆ ಹಲವಾರು ಕಾರಣಗಳಿರಬಹುದು. ದೇಹ ಸದಾ ದಣಿವು ಮತ್ತು ಸೋಮಾರಿತನದಿಂದ ಇರುವುದೇಕೆ ಎಂಬುದನ್ನು ನೋಡೋಣ.

ಕಳಪೆ ಆಹಾರ

ನಾವು ಸೇವಿಸುವ ಆಹಾರ ನಮ್ಮ ಶಕ್ತಿಯ ಮಟ್ಟಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಸಂಸ್ಕರಿಸಿದ ಆಹಾರಗಳು, ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿರುವ ಆಹಾರವು ಆಯಾಸ ಮತ್ತು ಆಲಸ್ಯವನ್ನು ಉಂಟುಮಾಡಬಹುದು. ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿರುವ ಸಮತೋಲಿತ ಆಹಾರವು ದಿನವಿಡೀ ನಮ್ಮನ್ನು ಶಕ್ತಿಯುತವಾಗಿ, ಚಟುವಟಿಕೆಯಿಂದಿಡಲು ಸಹಾಯ ಮಾಡುತ್ತದೆ.

ನಿರ್ಜಲೀಕರಣ

ದೇಹದಲ್ಲಿ ನೀರಿನ ಕೊರತೆ ಅಂದರೆ ನಿರ್ಜಲೀಕರಣ ಕೂಡ ಸುಸ್ತು ಮತ್ತು ಆಲಸ್ಯಕ್ಕೆ ಪ್ರಮುಖ ಕಾರಣ. ದೇಹದಲ್ಲಿ ನೀರಿನ ಕೊರತೆ ಉಂಟಾದಾಗ ರಕ್ತ ದಪ್ಪವಾಗುತ್ತದೆ ಮತ್ತು ಜೀವಕೋಶಗಳಿಗೆ ಪೋಷಕಾಂಶಗಳನ್ನು ತಲುಪಿಸಲು ಕಷ್ಟವಾಗುತ್ತದೆ. ಇದು ಸ್ನಾಯು ಸೆಳೆತ ಮತ್ತು ಆಯಾಸವನ್ನು ಉಂಟುಮಾಡಬಹುದು. ಆದ್ದರಿಂದ  ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಬಹಳ ಮುಖ್ಯ.

ನಿದ್ರೆಯ ಕೊರತೆ

ಚೆನ್ನಾಗಿ ನಿದ್ರಿಸದೇ ಇದ್ದಲ್ಲಿ ಆಲಸ್ಯ ಕಾಡುತ್ತದೆ. ರಾತ್ರಿ ಕನಿಷ್ಠ 7-8 ಗಂಟೆಗಳ ಕಾಲ ನಿದ್ದೆ ಮಾಡಬೇಕು. ನಿದ್ರೆಯಲ್ಲಿ ದೇಹವು ಸ್ವತಃ ದುರಸ್ತಿ ಮಾಡಿಕೊಳ್ಳುತ್ತದೆ, ಶಕ್ತಿಯನ್ನು ಮರುತುಂಬಿಸಿಕೊಳ್ಳುತ್ತದೆ.

ವ್ಯಾಯಾಮದ ಕೊರತೆ

ನಿಯಮಿತ ವ್ಯಾಯಾಮವು ದೈಹಿಕ ಸದೃಢತೆಗೆ ಮಾತ್ರವಲ್ಲ, ಮಾನಸಿಕ ಚೈತನ್ಯಕ್ಕೂ ಮುಖ್ಯವಾಗಿದೆ. ವ್ಯಾಯಾಮವು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಎಂಡಾರ್ಫಿನ್ ಎಂಬ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಇದು ನಮಗೆ ಸಂತೋಷ ಮತ್ತು ಶಕ್ತಿಯನ್ನು ನೀಡುತ್ತದೆ.

ವೈದ್ಯಕೀಯ ಕಾರಣಗಳು

ಕೆಲವೊಮ್ಮೆ ನಿರಂತರ ಆಯಾಸ ಮತ್ತು ಆಲಸ್ಯದ ಹಿಂದೆ ವೈದ್ಯಕೀಯ ಕಾರಣವಿರಬಹುದು. ಥೈರಾಯ್ಡ್ ಸಮಸ್ಯೆ, ರಕ್ತಹೀನತೆ, ಖಿನ್ನತೆ ಅಥವಾ ಯಾವುದೇ ದೀರ್ಘಕಾಲದ ಕಾಯಿಲೆಗಳು ಕೂಡ ಜಡತ್ವಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಯಾವುದೇ ಕಾರಣವಿಲ್ಲದೆ ನಿರಂತರವಾಗಿ ಆಯಾಸವನ್ನು ಅನುಭವಿಸುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...