alex Certify ಮೊಬೈಲ್‌ ಚಟದಿಂದಾಗಿ ಮಕ್ಕಳನ್ನು ಕಾಡುತ್ತಿದೆ ಇಂಥಾ ಗಂಭೀರ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್‌ ಚಟದಿಂದಾಗಿ ಮಕ್ಕಳನ್ನು ಕಾಡುತ್ತಿದೆ ಇಂಥಾ ಗಂಭೀರ ಸಮಸ್ಯೆ

ಹೆಚ್ಚುತ್ತಿರುವ ಮೊಬೈಲ್ ಫೋನ್ ಬಳಕೆ ಮಕ್ಕಳ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮೊಬೈಲ್ ಚಟದಿಂದಾಗಿ ಅನೇಕ ಮಕ್ಕಳು ಮಾತು ಕಲಿಯಲು ವಿಳಂಬ ಮಾಡುತ್ತಿದ್ದಾರೆ. ಮಕ್ಕಳಲ್ಲಿ ಸ್ಪೀಚ್‌ ಡಿಲೇ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಪೈಕಿ ಶೇ.25ರಷ್ಟು ಮಕ್ಕಳಲ್ಲಿ ಮೊಬೈಲ್ ಚಟದಿಂದಾಗಿ ಮಾತನಾಡುವಲ್ಲಿ ಸಮಸ್ಯೆ ಕಂಡು ಬಂದಿದೆ.

ಸ್ಪೀಚ್‌ ಥೆರಪಿ…

ಮಕ್ಕಳು ವಯಸ್ಸಿಗೆ ಸಮನಾಗಿ ಮಾತನಾಡಲು ಕಲಿಯದೇ ಇದ್ದಾಗ ಸ್ಪೀಚ್‌ ಥೆರಪಿ ಅನಿವಾರ್ಯವಾಗುತ್ತದೆ. ಸ್ಪೀಚ್ ಥೆರಪಿ ಮಕ್ಕಳು ಮತ್ತು ವಯಸ್ಕರು ತಮ್ಮ ಸಂವಹನ ಮತ್ತು ಭಾಷಾ ಕೌಶಲ್ಯಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಪರಿಣಾಮಕಾರಿಯಾಗಿ ಮಾತನಾಡುವ ಅಥವಾ ಸಂವಹನ ಮಾಡುವ ನಿಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ಜೀವನದ ಗುಣಮಟ್ಟವನ್ನು ಸುಧಾರಿಸುತ್ತದೆ.

ಮಕ್ಕಳ ಬೆಳವಣಿಗೆಯ ಮೇಲೆ ಮೊಬೈಲ್‌ ಪ್ರಭಾವ!

ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳು ವಿಚಲಿತರಾಗುತ್ತಿದ್ದಾರೆ ಮಕ್ಕಳು ಎಷ್ಟರಮಟ್ಟಿಗೆ ಫೋನ್‌ನಲ್ಲಿ ತಲ್ಲೀನರಾಗುತ್ತಾರೆಂದರೆ ಹಸಿವು ಅಥವಾ ಬಾಯಾರಿಕೆ ಕೂಡ ಅರಿವಿಗೆ ಬರುವುದಿಲ್ಲ. ಇದರಿಂದ ಮಕ್ಕಳಿಗೆ ಪದಗಳನ್ನು ಸರಿಯಾಗಿ ಬಳಸಲು ಗೊತ್ತಾಗುತ್ತಿಲ್ಲ. ಇದರಿಂದ 5-6 ವರ್ಷಗಳಾದರೂ ಮಕ್ಕಳು ಸ್ಪಷ್ಟವಾಗಿ ಮಾತನಾಡುವುದಿಲ್ಲ.

ಹಾಗಾಗಿ ಪೋಷಕರು ಮಕ್ಕಳಿಗೆ ಮೊಬೈಲ್ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ನೀಡುವುದರಿಂದ ಅವರ ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ಆಟ, ಓದು ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸರ್ವತೋಮುಖ ಬೆಳವಣಿಗೆ ಹೊಂದಬೇಕು.

ಮಕ್ಕಳ ಮನೋವಿಜ್ಞಾನಿಗಳು ಹೇಳುವ ಪ್ರಕಾರ ಮೊಬೈಲ್ ಚಟವು ಮಕ್ಕಳ ಮಾನಸಿಕ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಮಕ್ಕಳಲ್ಲಿ ಒಂಟಿತನ, ಕಿರಿಕಿರಿ ಮತ್ತು ಏಕಾಗ್ರತೆಗೆ ತೊಂದರೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...