ರಾತ್ರಿ ಮಲಗಿದಾಗ ಸಾಮಾನ್ಯವಾಗಿ ಎಲ್ಲರೂ ಕನಸು ಕಾಣ್ತಾರೆ. ಕೆಲವೊಂದು ಕನಸು ಶುಭ ಸಂಕೇತವಾದ್ರೆ ಮತ್ತೆ ಕೆಲವೊಂದು ಕನಸು ಅಶುಭದ ಸಂಕೇತ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯೋದಯದ ವೇಳೆ ಕಾಣುವ ಕನಸುಗಳು ನಿಜವಾಗುತ್ತವೆ.
ಬ್ರಹ್ಮಮಹೂರ್ತದಲ್ಲಿ ಕಂಡ ಸ್ವಪ್ನ 10 ದಿನದೊಳಗೆ ನಿಜವಾಗಲಿದೆ. ಮಧ್ಯರಾತ್ರಿ ಹಾಗೂ ಬ್ರಹ್ಮಮಹೂರ್ತದ ಮಧ್ಯೆ ಕಂಡ ಕನಸು ಒಂದರಿಂದ ಹತ್ತು ತಿಂಗಳೊಳಗೆ ಪೂರ್ಣಗೊಳ್ಳಲಿದೆ.
ಕೆಲವೊಂದು ಸ್ವಪ್ನ ವ್ಯಕ್ತಿ ಕೋಟ್ಯಾಧೀಶನಾಗುವ ಸಂಕೇತ ನೀಡುತ್ತದೆ. ನಿಮ್ಮ ಕನಸಿನಲ್ಲಿಯೂ ಇಂಥ ವಸ್ತುಗಳು ಕಂಡರೆ ನೀವು ಕೋಟ್ಯಾಧೀಶರಾಗೋದು ನಿಶ್ಚಿತ.
ವ್ಯಕ್ತಿ ಅಥವಾ ಪ್ರೇಮಿಯನ್ನು ಭೇಟಿಯಾದಂತೆ ಹುಡುಗಿ ಕನಸು ಕಂಡ್ರೆ ಆಕೆ ಮದುವೆ ಶ್ರೀಮಂತನ ಜೊತೆಯಾಗುತ್ತೆ ಎಂದರ್ಥ. ಇಲ್ಲವೆ ಮದುವೆಯಾದ್ಮೇಲೆ ಆಕೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ ಎಂಬುದರ ಸಂಕೇತ.
ಕನಸಿನಲ್ಲಿ ನಾಯಿ ಕಚ್ಚಿದಂತೆ ಕಂಡರೆ ನೀವು ಸದ್ಯದಲ್ಲಿಯೇ ಶ್ರೀಮಂತರಾಗ್ತೀರಿ ಎಂದರ್ಥ.
ಹಸು, ಕರುವಿನ ಜೊತೆ ಕಂಡರೆ ಅಥವಾ ಕರು ಹಾಲು ಕುಡಿಯುತ್ತಿದ್ದಂತೆ ಸ್ವಪ್ನ ಬಿದ್ದರೂ ಒಳ್ಳೆಯದು.
ಕನಸಿನಲ್ಲಿ ಮಗು ಅಂಬೆಗಾಲಿಟ್ಟು ನಡೆದಂತೆ ಕಂಡರೆ ಸದ್ಯದಲ್ಲಿಯೇ ನಿಮ್ಮ ಖಜಾನೆ ತುಂಬಲಿದೆ ಎಂದರ್ಥ.
ಇರುವೆಗಳು ಒಂದೇ ಸಾಲಿನಲ್ಲಿ ಚಲಿಸುತ್ತಿದ್ದಂತೆ ಕಂಡರೂ ಅದು ಶ್ರೀಮಂತನಾಗುವ ಸಂಕೇತ.
ಕನಸಿನಲ್ಲಿ ದೇವಸ್ಥಾನ ಕಾಣುವುದು ಒಳ್ಳೆಯದು. ಅದ್ರಲ್ಲೂ ದೇವರ ಕಲಶ ಕಂಡರೆ ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆಂದರ್ಥ.
ಎಳೆ ನೀರು ಕುಡಿದಂತೆ ಅಥವಾ ಬೇರೆಯವರಿಗೆ ಹಂಚಿದಂತೆ ಕಂಡರೆ ಯಾವುದೋ ಮೂಲದಿಂದ ಧನ ಪ್ರಾಪ್ತಿಯಾಗುತ್ತೆ ಎಂದರ್ಥ.