alex Certify ಅತಿಯಾದ ಅರಿಶಿನ ಸೇವನೆಯಿಂದ ಕಾಡಬಹುದು ಇಂಥಾ ಅಪಾಯಕಾರಿ ಕಾಯಿಲೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿಯಾದ ಅರಿಶಿನ ಸೇವನೆಯಿಂದ ಕಾಡಬಹುದು ಇಂಥಾ ಅಪಾಯಕಾರಿ ಕಾಯಿಲೆ

ಅರಿಶಿನ ಬಹು ಉಪಯೋಗಿ. ಭಾರತದ ಪ್ರತಿ ಅಡುಗೆ ಮನೆಯಲ್ಲೂ ಇರುವಂತಹ ಮಸಾಲೆ ಪದಾರ್ಥ. ಕೇವಲ ಅಡುಗೆಗೆ ಮಾತ್ರವಲ್ಲ, ಅನಾದಿ ಕಾಲದಿಂದಲೂ ಅರಿಶಿನವನ್ನು ನಾವು ಆಯುರ್ವೇದ ಔಷಧಿಯಾಗಿ ಬಳಸುತ್ತ ಬಂದಿದ್ದೇವೆ. ತಾಜಾ ಗಾಯಗಳನ್ನು ಒಣಗಿಸಲು ಇದನ್ನು ರಾತ್ರಿ ಹಾಲಿನೊಂದಿಗೆ ಸೇವಿಸಲಾಗುತ್ತದೆ.

ಅಧಿಕ ರಕ್ತದೊತ್ತಡ ಸೇರಿದಂತೆ ಅನೇಕ ಸಮಸ್ಯೆಗಳಿಗೆ ಅರಿಶಿನ ರಾಮಬಾಣ. ಆದರೆ ಅತಿಯಾಗಿ ಅರಿಶಿನವನ್ನು ಸೇವನೆ ಮಾಡಿದ್ರೆ ಅನೇಕ ಬಗೆಯ ದುಷ್ಪರಿಣಾಮಗಳೂ ಇವೆ. ಆರೋಗ್ಯಕ್ಕೆ ಇದು ಹಾನಿಕಾರಕವಾಗಿ ಪರಿಣಮಿಸುತ್ತದೆ.

ಮೂತ್ರಪಿಂಡದಲ್ಲಿ ಕಲ್ಲು…

ಸೀಮಿತ ಪ್ರಮಾಣದಲ್ಲಿ ಅರಿಶಿನವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳು ದೊರೆಯುತ್ತವೆ. ಆದರೆ ಆರೋಗ್ಯಕ್ಕೆ ಒಳ್ಳೆಯದು ಎಂದುಕೊಂಡು ಅತಿಯಾಗಿ ಸೇವಿಸಿದರೆ ಅದರಲ್ಲಿರುವ ಆಕ್ಸಲೇಟ್ ಪ್ರಮಾಣವು ನಮ್ಮ ದೇಹದಲ್ಲಿ ಕಲ್ಲುಗಳನ್ನು ರೂಪಿಸಲು ಪ್ರಾರಂಭಿಸುತ್ತದೆ. ಹಾಗಾಗಿ ಅತಿಯಾದ ಪ್ರಮಾಣದಲ್ಲಿ ಅರಿಶಿನವನ್ನು ಸೇವನೆ ಮಾಡುವುದರಿಂದ ಮೂತ್ರಪಿಂಡದಲ್ಲಿ ಕಲ್ಲು ಬೆಳೆಯುವ ಸಾಧ್ಯತೆ ಇರುತ್ತದೆ.

ಅತಿಸಾರ…

ಸಾಮಾನ್ಯವಾಗಿ ಹೊರಗಿನ ಆಹಾರವು ಅತಿಸಾರಕ್ಕೆ ಕಾರಣವಾಗುವುದಿಲ್ಲ, ಆದರೆ ಹೆಚ್ಚಿನ ಪ್ರಮಾಣದ ಅರಿಶಿನವು ಈ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ. ಏಕೆಂದರೆ ಇದರಲ್ಲಿ ಕರ್ಕ್ಯುಮಿನ್ ಇದೆ, ಇದು ನಮ್ಮ ಹೊಟ್ಟೆಯಲ್ಲಿ ಗ್ಯಾಸ್ಟ್ರಿಕ್ ಡಕ್ಟ್ ಸರಿಯಾಗಿ ಕೆಲಸ ಮಾಡುವುದನ್ನು ತಡೆಯುತ್ತದೆ.  ಇದರಿಂದಾಗಿ ಅತಿಸಾರದ ಸಮಸ್ಯೆಯು ಪ್ರಾರಂಭವಾಗುತ್ತದೆ.

ಕಬ್ಬಿಣದ ಕೊರತೆ…

ಇತ್ತೀಚಿನ ಆಹಾರ ಮತ್ತು ಪಾನೀಯಗಳಿಂದ ನಮ್ಮ ದೇಹಕ್ಕೆ ಸಾಕಷ್ಟು ಜೀವಸತ್ವಗಳು, ಖನಿಜಗಳು ಮತ್ತು ಕಬ್ಬಿಣದ ಅಂಶ ಸಿಗುವುದಿಲ್ಲ. ಆದರೆ ಇವೆಲ್ಲವೂ ದೇಹಕ್ಕೆ ಅತ್ಯಂತ ಅಗತ್ಯವಾಗಿವೆ. ಅರಿಶಿನವನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಕಬ್ಬಿಣದ ಅಂಶವು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ದೌರ್ಬಲ್ಯದ ಜೊತೆಗೆ ಇತರ ಸಮಸ್ಯೆಗಳು ಹೆಚ್ಚಾಗಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...