ಐಪಿಎಲ್ 2025 ಆರಂಭಕ್ಕೆ ಕೆಲವೇ ದಿನಗಳಿರುವಾಗ, ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದೆ. ಬೂಮ್ರಾ, ಮಾಲಿಂಗರಂತಹ ಬೌಲರ್‌ಗಳನ್ನೂ ಮರೆಸುವಂತಹ ವಿಚಿತ್ರ ಬೌಲಿಂಗ್ ಶೈಲಿಯ ವಿಡಿಯೋವೊಂದು ವೈರಲ್ ಆಗಿದೆ.
ಈ ವಿಡಿಯೋದಲ್ಲಿ ಬೌಲರ್ ನಿಂತಲ್ಲೇ ಬೌಲಿಂಗ್ ಮಾಡುವುದನ್ನು ಕಾಣಬಹುದು. ಬಲಗೈಯನ್ನು ತಿರುಗಿಸಿ, ಎಡಗೈಯನ್ನು ಸೊಂಟದ ಹಿಂದೆ ತೆಗೆದುಕೊಂಡು ಚೆಂಡನ್ನು ಎಸೆಯುತ್ತಾರೆ. ಈ ವಿಚಿತ್ರ ಶೈಲಿಯಿಂದ ಬ್ಯಾಟ್ಸ್‌ಮನ್‌ಗಳು ಗೊಂದಲಕ್ಕೀಡಾಗುತ್ತಿದ್ದಾರೆ. ರಿವರ್ಸ್ ಸ್ವೀಪ್ ಶಾಟ್ ಆಡಲು ಸಿದ್ಧರಾಗಿದ್ದ ಬ್ಯಾಟ್ಸ್‌ಮನ್ ಕೂಡ ಚೆಂಡನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ.
ಈ ಬೌಲಿಂಗ್ ಶೈಲಿ ಪಾಲ್ ಆಡಮ್ಸ್, ಮಾಲಿಂಗ, ಮುರಳೀಧರನ್ ಮತ್ತು ಸೊಹೈಲ್ ತನ್ವೀರ್ ಅವರಂತಹ ಬೌಲರ್‌ಗಳನ್ನೂ ನೆನಪಿಸುತ್ತದೆ. ಈ ಬೌಲರ್‌ಗಳು ಕೂಡ ತಮ್ಮ ವಿಚಿತ್ರ ಶೈಲಿಯಿಂದ ಬ್ಯಾಟ್ಸ್‌ಮನ್‌ಗಳನ್ನು ಗೊಂದಲಕ್ಕೀಡು ಮಾಡಿದ್ದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ. ಈ ಬೌಲರ್ ಐಪಿಎಲ್ ನಲ್ಲಿ ಮಿಂಚುವ ಸಾಧ್ಯತೆ ಇದೆ ಎಂದು ಕ್ರಿಕೆಟ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Pura batsman samaj dara hua h pic.twitter.com/DT5HkJ6KNA
— Kattappa (@kattappa_12) March 17, 2025