ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್-2 ಕಾಮಗಾರಿಗಾಗಿ ಮರ ಕಡಿಯುವ ಕ್ರಮಕ್ಕೆ ಹೈಕೋರ್ಟ್ ತಡೆ ನೀಡಿದೆ.
ಕಾರಿಡಾರ್-2 ಬೆನ್ನಿಗಾನಹಳ್ಳಿ ಮತ್ತು ಚಿಕ್ಕಬಾಣಾವರ ಮಧ್ಯೆ ಕಾಮಗಾರಿಗಾಗಿ ಜುಲೈ 12ರವರೆಗೆ 699 ಮರಗಳನ್ನು ಕಡಿಯಲು ಉದ್ದೇಶಿಸಲಾಗಿತ್ತು. ಆದರೆ ಕರ್ನಾಟಕ ಹೈಕೋರ್ಟ್ ಮರ ಕಡಿಯಲು ತಡೆ ನೀಡಿದೆ.
ದತ್ತಾತ್ರೇಯ ಟಿ ದೇವರೆ ಹಾಗೂ ಬೆಂಗಳೂರು ಎನ್ವಿರಾನ್ಮೆಂಟ್ ಟ್ರಸ್ಟ್ ಬೆಂಗಳೂರಿನಲ್ಲಿ ಮರ ಗಣತಿ ಕೋರಿ ಸಲ್ಲಿಸಿದ್ದ ಪಿಐಎಲ್ ವಿಚರಣೆ ನಡೆಸಿದ ನ್ಯಾಯಾಲಯ ಮರ ಕಡಿಯುವುದಕ್ಕೆ ತಡೆಯಾಜ್ಞೆ ನೀಡಿದೆ.
2024ರ ಮೇ 29ರ ಜ್ಞಾಪಕ ಪತ್ರದಲ್ಲಿ ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ರಸ್ತೆ ಅಗಲಗೊಳಿಸಲು 699 ಮರಗಳನ್ನು ಕಡಿಯಲು ಅಧಿಕಾರ ನೀಡಿದ್ದರು. 89 ಮರಗಳನ್ನು ಸ್ಥಳಾಂತರಿಸುವುದಾಗಿ ಉಲ್ಲೇಖಿಸಿದ್ದರು. ಆದರೆ ಬಿಬಿಎಂಪಿ ಇದನ್ನು ಪಾಲಿಸಿಲ್ಲ. ಈ ಹಿನ್ನೆಲೆಯಲ್ಲಿ ತೀರಾ ಅನಿವಾರ್ಯವಲ್ಲದ ಹೊರತು ಮರಗಳನ್ನು ಕಡಿಯಬಾರದು ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.